ಕೋಲ್ಕತಾ ನೈಟ್ ರೈಡರ್ಸ್ನ ಆರಂಭಿಕ ಪಂದ್ಯಕ್ಕೆ ಮೊರ್ಗನ್, ಕಮಿನ್ಸ್ ಲಭ್ಯ
ಹೊಸದಿಲ್ಲಿ: ಐಪಿಎಲ್ನ ಮೊದಲ ಪಂದ್ಯಕ್ಕಿಂತ ಕೆಲವೇ ದಿನಗಳ ಮೊದಲು ನಡೆಯಲಿರುವ ಏಕದಿನ ಸರಣಿಯಲ್ಲಿ ಭಾಗವಹಿಸುತ್ತಿರುವ ಹೊರತಾಗಿಯೂ ಇಂಗ್ಲೆಂಡ್ನ ನಾಯಕ ಇಯಾನ್ ಮೊರ್ಗನ್ ಹಾಗೂ ಆಸ್ಟ್ರೇಲಿಯದ ವೇಗದ ಬೌಲರ್ ಪ್ಯಾಟ್ ಕಮಿನ್ಸ್ ಕೋಲ್ಕತಾ ನೈಟ್ ರೈಡರ್ಸ್ನ (ಕೆಕೆಆರ್) ಮೊದಲ ಪಂದ್ಯದಲ್ಲಿ ಲಭ್ಯವಿರಲಿದ್ದಾರೆ ಎಂದು ತಂಡದ ಮುಖ್ಯ ಕಾರ್ಯನಿರ್ವಾಹಕರು ತಿಳಿಸಿದರು.
ನೈಟ್ ರೈಡರ್ಸ್ ಅಬುಧಾಬಿಯಲ್ಲಿ 14 ದಿನಗಳ ಬದಲಿಗೆ 6 ದಿನಗಳ ಕ್ವಾರಂಟೈನ್ನಲ್ಲಿರಲಿದ್ದು, ಮೊರ್ಗನ್, ಕಮಿನ್ಸ್ ಹಾಗೂ ಇಂಗ್ಲೆಂಡ್ನ ಇನ್ನೋರ್ವ ಬ್ಯಾಟ್ಸ್ಮನ್ ಟಾಮ್ ಬಂಟನ್ ಸೆಪ್ಟಂಬರ್ 23ರಂದು ನಡೆಯಲಿರುವ ಕೆಕೆಆರ್ನ ಮೊದಲ ಪಂದ್ಯದಲ್ಲಿ ಆಡಲಿದ್ದಾರೆ ಎಂದು ಸಿಇಒ ವೆಂಕಿ ಮೈಸೂರು ತಿಳಿಸಿದ್ದಾರೆ.
ಯುಎಇಯಲ್ಲಿ ಐಪಿಎಲ್ ಆರಂಭವಾಗುವ ಮೂರು ದಿನಗಳ ಮೊದಲು ಸೆಪ್ಟಂಬರ್ 16ರಂದು ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯ ನಡುವಿನ ಏಕದಿನ ಸರಣಿಯು ಕೊನೆಗೊಳ್ಳಲಿದೆ.
ಇಂಗ್ಲೆಂಡ್, ಆಸ್ಟ್ರೇಲಿಯದ ಆಟಗಾರರು ಸೆಪ್ಟಂಬರ್ 17ರಂದು ಅಬುಧಾಬಿಗೆ ಆಗಮಿಸಲಿದ್ದಾರೆ. ಸೆಪ್ಟಂಬರ್ 23ರಂದು ಆರು ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಲಿದ್ದಾರೆ. ಇದು ಟೂರ್ನಿಯ ದೃಷ್ಟಿಯಿಂದ ಉತ್ತಮವಾಗಿದೆ ಎಂದು ವೆಂಕಿ ಹೇಳಿದ್ದಾರೆ.