ಯುಎಇಗೆ ಹೊಂದಿಕೊಳ್ಳುವುದು ದೊಡ್ಡ ಸವಾಲು: ಎಬಿಡಿ
ದುಬೈ:ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಯುಎಇಯ ಬಿಸಿ ವಾತಾವರಣ ಮತ್ತು ಆರ್ದ್ರ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದು ಎಲ್ಲಾ ತಂಡಗಳಿಗೆ ದೊಡ್ಡ ಸವಾಲು ಎಂದು ದಕ್ಷಿಣ ಆಫ್ರಿಕಾದ ಸ್ಟಾರ್ ಎ.ಬಿ.ಡಿವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ.
ಬಹುತೇಕ ಪಂದ್ಯಗಳನ್ನು ರಾತ್ರಿಯಲ್ಲಿ ಆಡಲಾಗುತ್ತದೆ. ಆದರೆ ಪರಿಸ್ಥಿತಿ ಇನ್ನೂ ಕಠಿಣವಾಗಿರುತ್ತದೆ ಎಂದು ಹೇಳಿದ್ದಾರೆ.
‘‘ನಾನು ಈ ರೀತಿಯ ಪರಿಸ್ಥಿತಿಗೆ ನಿಜವಾಗಿಯೂ ಇನ್ನೂ ಹೊಂದಿಕೊಂಡಿಲ್ಲ. ಇದು ತುಂಬಾ ಬಿಸಿಯಾಗಿರುತ್ತದೆ, ಇದು ಜುಲೈನಲ್ಲಿ ಚೆನ್ನೈನಲ್ಲಿ ನಾವು ಆಡಿದ ಟೆಸ್ಟ್ ಪಂದ್ಯವೊಂದನ್ನು ನೆನಪಿಸುತ್ತದೆ. ಅಲ್ಲಿ ವೀರೇಂದ್ರ ಸೆಹ್ವಾಗ್ 300 ರನ್ ಗಳಿಸಿದರು. ಇದು ನಾನು ಅನುಭವಿಸಿದ ಅತ್ಯಂತ ಬಿಸಿಯಾದ ಹವಾಮಾನ ಪರಿಸ್ಥಿತಿಗಳಲ್ಲಿ ಒಂದಾಗಿದೆ ’’ಎಂದು ಅವರು ಆರ್ಸಿಬಿ ತಂಡದ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಿದ ಸಂದರ್ಶನದಲ್ಲಿ ಹೇಳಿದರು.
Next Story