ಬಿಸಿಸಿಐ ಮಹಿಳಾ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ನೀತು ಡೇವಿಡ್ ಆಯ್ಕೆ
ಹೊಸದಿಲ್ಲಿ, ಸೆ.26: ಭಾರತದ ಓರ್ವ ಶ್ರೇಷ್ಠ ಮಹಿಳಾ ಕ್ರಿಕೆಟರ್ ನೀತು ಡೇವಿಡ್ ಮಹಿಳಾ ಆಯ್ಕೆ ಸಮಿತಿಯ ಅಧ್ಯಕ್ಷೆಯಾಗಿ ಅಯ್ಕೆಯಾಗಿರುವುದಾಗಿ ಬಿಸಿಸಿಐ ಶನಿವಾರ ಘೋಷಿಸಿದೆ.
ನೀತು ಅವರು ಹೇಮಲತಾ ಕಾಲಾ ಅವರಿಂದ ತೆರವಾದ ಸ್ಥಾನವನ್ನು ತುಂಬಲಿದ್ದಾರೆ.
ಆಯ್ಕೆ ಸಮಿತಿಯಲ್ಲಿರುವ ಇತರ ಸದಸ್ಯರುಗಳೆಂದರೆ: ಮಿಥು ಮುಖರ್ಜಿ, ರೇಣು ಮಾರ್ಗರೆಟ್, ಆರತಿ ವೈದ್ಯ ಹಾಗೂ ವಿ. ಕಲ್ಪನಾ. ಇವರೆಲ್ಲರೂ ಮಾಜಿ ಭಾರತದ ಕ್ರಿಕೆಟ್ ಆಟಗಾರ್ತಿಯರಾಗಿದ್ದಾರೆ.
ಕಾಲಾ ನೇತೃತ್ವದ ಆಯ್ಕೆ ಸಮಿತಿಯ ನಾಲ್ಕು ವರ್ಷಗಳ ಅಧಿಕಾರದ ಅವಧಿಯು ಮಾರ್ಚ್ 2020ಕ್ಕೆ ಅಂತ್ಯವಾಗಿದೆ.
Next Story