ಐಪಿಎಲ್ನಲ್ಲಿ ಸಿಕ್ಸರ್ ಸುರಿಮಳೆ!
ಕೇವಲ10 ಪಂದ್ಯಗಳಲ್ಲಿ 153 ಸಿಕ್ಸರ್
ದುಬೈ: ಯುಎಇಯಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಸಿಕ್ಸರ್ ಮಳೆ ಕಂಡು ಬಂದಿದೆ. ಈ ವರೆಗೆ ನಡೆದಿರುವ 10 ಪಂದ್ಯಗಳಲ್ಲಿ 153 ಸಿಕ್ಸರ್ ದಾಖಲಾಗಿವೆ.
ಶಾರ್ಜಾ, ಅಬುಧಾಬಿ ಮತ್ತು ದುಬೈ ಕ್ರೀಡಾಂಗಣಗಳಲ್ಲಿ ಐಪಿಎಲ್ ಪಂದ್ಯಗಳು ನಡೆಯುತ್ತಿವೆೆ. ಕೇವಲ ಎರಡು ಪಂದ್ಯಗಳಲ್ಲಿ 62 ಸಿಕ್ಸರ್ಗಳು ಸಿಡಿಯಲ್ಪಟ್ಟಿದೆ. ಶಾರ್ಜಾದ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ 2 ಪಂದ್ಯಗಳಲ್ಲಿ 62 ಸಿಕ್ಸರ್, ಅಬುಧಾಬಿಯ ಶೇಖ್ ಝಾಹಿದ್ ಕ್ರೀಡಾಂಗಣದಲ್ಲಿ ಇದುವರೆಗೆ 3 ಪಂದ್ಯಗಳಲ್ಲಿ 33 ಸಿಕ್ಸರ್ಮತ್ತು ದುಬೈ ಅಂತರ್ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇದುವರೆಗೆ 5 ಪಂದ್ಯಗಳಲ್ಲಿ 58 ಸಿಕ್ಸರ್ಗಳು ದಾಖಲಾಗಿವೆ.
ರಾಜಸ್ಥಾನ ರಾಯಲ್ಸ್ನ ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ಸಂಜು ಸ್ಯಾಮ್ಸನ್ 2 ಪಂದ್ಯಗಳಲ್ಲಿ 16 ಸಿಕ್ಸರ್ ಸಿಡಿಸಿದ್ದಾರೆ. ಕಿಂಗ್ಸ್ ಇಲೆವೆನ್ ತಂಡದ ಮಾಯಾಂಕ್ ಅಗರ್ವಾಲ್ 3 ಪಂದ್ಯಗಳಲ್ಲಿ 11 ಸಿಕ್ಸರ್ , ಕಿಂಗ್ಸ್ ಇಲೆವೆನ್ ತಂಡದ ನಾಯಕ ಲೋಕೇಶ್ ರಾಹುಲ್ 3 ಪಂದ್ಯಗಳಲ್ಲಿ 9 ಸಿಕ್ಸರ್ ಮತ್ತು ಮುಂಬೈ ಇಂಡಿಯನ್ಸ್ ನ ಇಶಾನ್ ಕಿಶನ್ ಕೇವಲ 1 ಪಂದ್ಯದಲ್ಲಿ 9 ಸಿಕ್ಸರ್ ಬಾರಿಸಿದ್ದಾರೆ.