ಫ್ರೆಂಚ್ ಓಪನ್: ಮುಗುರುಝಾಗೆ ಜಯ
ಪ್ಯಾರಿಸ್: ಫ್ರೆಂಚ್ ಓಪನ್ನಲ್ಲಿ ಮೊದಲ ಸುತ್ತಿನ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಸ್ಪೇನ್ನ ಗಾರ್ಬೈನ್ ಮುಗುರುಝಾ ಅವರು ತನ್ನ ಎದುರಾಳಿ ಸ್ಲೋವೆನಿಯಾದ ತಾಮಾರ ಝಿಡಾನ್ಸೆಕ್ ವಿರುದ್ಧ ಮೂರು ಗಂಟೆಗಳ ಹೋರಾಟ ನಡೆಸಿ ಜಯ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮುಗುರುಝಾ ಎದುರಾಳಿ ಝಿಡಾನ್ಸೆಕ್ ವಿರುದ್ಧ 7-5, 4-6, 8-6 ಸೆಟ್ಗಳ ಅಂತರದಲ್ಲಿ ಜಯ ಸಾಧಿಸಿ ಎರಡನೇ ಸುತ್ತು ಪ್ರವೇಶಿಸಿದರು.
ಮಾಜಿ ಚಾಂಪಿಯನ್ ಸ್ವೆಟ್ಲಾನಾ ಕುಜ್ನೆಟ್ಸೊವಾ ರನ್ನು ಕಳೆದ ವರ್ಷದ ರನ್ನರ್ ಅಪ್ ಮರ್ಕೆಟಾ ವೊಂಡ್ರೊಸೊವಾ ಮತ್ತು ಮೂರು ಬಾರಿ ಗ್ರಾನ್ ಸ್ಲಾಮ್ ಚಾಂಪಿಯನ್ ಏಂಜೆಲಿಕ್ ಕೆರ್ಬರ್ ಎಲ್ಲರೂ ಮೊದಲ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದಾರೆ.
Next Story