ಆಕರ್ಷಕ ಕ್ಯಾಚ್ ಪಡೆದು ಐಪಿಎಲ್ ದಾಖಲೆ ಮುರಿದ ಧೋನಿ
Photo: Twitter
ಅಬುಧಾಬಿ: ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಶಿವಂ ಮಾವಿ ನೀಡಿದ ಕ್ಯಾಚ್ ನ್ನು ಆಕರ್ಷಕವಾಗಿ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ವಯಸ್ಸು ಕೇವಲ ನಂಬರ್ ಮಾತ್ರ ಎಂದು ತೋರಿಸಿಕೊಟ್ಟರು.
ಈ ಕ್ಯಾಚ್ ಪಡೆಯುವ ಮೂಲಕ ಧೋನಿ ಐಪಿಎಲ್ ನಲ್ಲಿ ಹೆಚ್ಚು ಕ್ಯಾಚ್ ಗಳನ್ನು ಪಡೆದ ಮೊದಲ ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ಎಂಬ ಕೀರ್ತಿಗೂ ಭಾಜನರಾದರು. 104 ಕ್ಯಾಚ್ ಗಳನ್ನು ಪಡೆದಿರುವ ಧೋನಿ 103 ಕ್ಯಾಚ್ ಪಡೆದಿದ್ದ ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್ ದಾಖಲೆಯೊಂದನ್ನು ಮುರಿದರು.
ಕೆಕೆಆರ್ ಇನಿಂಗ್ಸ್ ನ ಕೊನೆಯ ಓವರ್ ನಲ್ಲಿ ಬ್ರಾವೊ ಬೌಲಿಂಗ್ ನಲ್ಲಿ ಶಿವಂ ಬ್ಯಾಟಿಗೆ ತಗಲಿ ಚಿಮ್ಮಿದ ಚೆಂಡು ಧೋನಿಯ ಗ್ಲೌಸ್ ಇಲ್ಲದ ಬಲಗೈಗೆ ಸವರಿ ಮೇಲಕ್ಕೆ ಚಿಮ್ಮಿತು. ಆಗ ಮುಂದಕ್ಕೆ ಜಿಗಿದ ಧೋನಿ ಕ್ಯಾಚ್ ಪಡೆಯಲು ಸಫಲರಾದರು.
Did You Watch ? Watch Out: Flying MS Dhoni
— IndianPremierLeague (@IPL) October 7, 2020
Play this on loop and keep watching this @msdhoni magic behind the stumps. Catch par excellence from MSD.https://t.co/yE7SsOWcIW #Dream11IPL