ಸೆಂಟ್ ಪೀಟರ್ಸ್ಬರ್ಗ್ ಓಪನ್ : ಮೆಡ್ವೆಡೆವ್, ವಾವ್ರಿಂಕಾಗೆ ಗೆಲುವು
ಸೈಂಟ್ ಪೀಟರ್ಸ್ಬರ್ಗ್ (ರಶ್ಯ),ಅ.15: ಸೈಂಟ್ ಪೀಟರ್ಸ್ಬರ್ಗ್ ಓಪನ್ ಪಂದ್ಯಾವಳಿಯಲ್ಲಿ ಅಗ್ರ ಶ್ರೇಯಾಂಕಿತ ಡೇನಿಯಲ್ ಮೆಡ್ವೆಡೆವ್ ಅವರು ರಿಚರ್ಡ್ ಗ್ಯಾಸ್ಕೆಟ್ ವಿರುದ್ಧ ಬುಧವಾರ 3-6, 6-3, 6-0 ಅಂತರದಿಂದ ಜಯಗಳಿಸಿದರು.
ಅರ್ಹತಾ ಪಂದ್ಯದ ಮೂಲಕ ಪ್ರಧಾನ ಸುತ್ತು ಪ್ರವೇಶಿಸಿದ ಆಟಗಾರ ನಿನೊ ಸೆರ್ಡಾರೂಸಿಕ್ ವಿರುದ್ಧ 3-6, 7-6 (5), 6-2 ಅಂತರದಲ್ಲಿ ಜಯ ಗಳಿಸಿದ ರೀಲಿ ಒಪೆಲ್ಕಾರನ್ನು ಮೆಡ್ವೆಡೆವ್ ಎರಡನೇ ಸುತ್ತಿನಲ್ಲಿ ಎದುರಿಸಲಿದ್ದಾರೆ.
ಕ್ವಾರ್ಟರ್ಫೈನಲ್ನಲ್ಲಿ ಸ್ಟ್ಯಾನ್ ವಾವ್ರಿಂಕಾ 6-1, 3-6, 6-3 ಸೆಟ್ಗಳಿಂದ ಎವೆಗಿನಿ ಡಾನ್ಸ್ಕೊಯ್ ವಿರುದ್ಧ ಜಯಗಳಿಸಿದರು. ವಾವ್ರಿಂಕಾ ಮುಂದಿನ ಎರಡನೇ ಶ್ರೇಯಾಂಕದ ಕೆನಡಾದ ಡೆನಿಸ್ ಶಪೋವೊಲೊವ್ ಅವರನ್ನು ಎದುರಿಸಲಿದ್ದಾರೆ.
Next Story