ಏಳು ತಿಂಗಳ ಬಳಿಕ ಐ-ಲೀಗ್ ಟ್ರೋಫಿ ಸ್ವೀಕರಿಸಿದ ಮೋಹನ್ ಬಗಾನ್
ಕೋಲ್ಕತಾ, ಅ.18: ಐ-ಲೀಗ್ ಚಾಂಪಿ ಯನ್ ಆಗಿ ಹೊರಹೊಮ್ಮಿದ ಏಳು ತಿಂಗಳುಗ ಬಳಿಕ ಮೋಹನ್ ಬಗಾನ್ ಫುಟ್ಬಾಲ್ ಕ್ಲಬ್ನ ಆಟಗಾರರು ರವಿವಾರ ನಡೆದ ಸಮಾರಂಭ ವೊಂದರಲ್ಲಿ ಮಿನುಗುವ ಟ್ರೋಫಿಯನ್ನು ಸ್ವೀಕರಿಸಿ ಸಂಭ್ರಮಿಸಿದರು.
ಮಾಜಿ ಚಾಂಪಿಯನ್ ಐರೆಲ್ ಎಫ್ಸಿ ವಿರುದ್ಧ ಮಾರ್ಚ್ 10ರಂದು ನಡೆದಿದ್ದ ಪಂದ್ಯದಲ್ಲಿ 1-0 ಅಂತರದಿಂದ ಜಯ ಸಾಧಿಸಿದ್ದ ಮೋಹನ್ ಬಗಾನ್ ಇನ್ನೂ 4 ಸುತ್ತುಗಳು ಬಾಕಿ ಇರುವಾಗಲೇ ಐ-ಲೀಗ್ ಪ್ರಶಸ್ತಿಯನ್ನು ಎತ್ತಿಹಿಡಿದಿತ್ತು. ಐ-ಲೀಗ್ ಏಕಾಏಕಿ ಕೊನೆಗೊಳ್ಳಲು ಕಾರಣವಾದ ಕೋವಿಡ್-19ರಿಂದಾಗಿ ಪ್ರಶಸ್ತಿ ಪ್ರದಾನ ಸಮಾರಂಭ ಮುಂದೂಡಲಾಗಿತ್ತು.
ಕ್ಲಬ್ ಅಧ್ಯಕ್ಷ ಸ್ವಪನ್ ಸಧನ್ ಬೋಸ್ ಹಾಗೂ ಪಶ್ಚಿಮ ಬಂಗಾಳದ ಕ್ರೀಡಾ ಸಚಿವ ಅರೂಪ್ ಬಿಸ್ವಾಸ್ ಉಪಸ್ಥಿತಿಯಲ್ಲಿ ಐ-ಲೀಗ್ ಸಿಇಒ ಸುನಂದೊ ಧರ್ ಅವರು ಟ್ರೋಫಿಯನ್ನು ಕೆಲವು ಆಟಗಾರರು ಹಾಗೂ ಅಧಿಕಾರಿಗಳಿಗೆ ಹಸ್ತಾಂತರಿಸಿದರು.
ಐ-ಲೀಗ್ ಟ್ರೋಫಿಯನ್ನು ಕ್ಲಬ್ ಟೆಂಟ್ಗೆ ಸಾಗಿಸುವ ಹಾದಿಯಲ್ಲಿ ಹಲವಾರು ಫುಟ್ಬಾಲ್ ಅಭಿಮಾನಿಗಳು ಮುಖಗವಸು ಧರಿಸದೆ ಕುಣಿದು ಕುಪ್ಪಳಿಸಿದರು.
Next Story