ಶಂಕಾಸ್ಪದ ಬೌಲಿಂಗ್: ಕೆಕೆಆರ್ ಸ್ಪಿನ್ನರ್ ಸುನೀಲ್ ನರೇನ್ ದೋಷ ಮುಕ್ತ
ಮುಂಬೈ, ಅ.18: ಪ್ರಮುಖ ಸ್ಪಿನ್ನರ್ ಸುನೀಲ್ ನರೇನ್ ಐಪಿಎಲ್ ಅಧಿಕಾರಿಗಳಿಂದ ಶಂಕಾಸ್ಪದ ಬೌಲಿಂಗ್ ಶೈಲಿಯ ಆರೋಪದಿಂದ ಮುಕ್ತರಾಗಿದ್ದಾರೆ. ಕಳೆದ ವಾರ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದ ವೇಳೆ ನರೇನ್ ಈ ಆರೋಪಕ್ಕೆ ಒಳಗಾಗಿದ್ದರು. ಈ ಬೆಳವಣಿಗೆಯು ಕೆಕೆಆರ್ ಬೌಲಿಂಗ್ ಬಲವನ್ನು ಹೆಚ್ಚಿಸಿದೆ.
ಕೆರಿಬಿಯನ್ನ ಆಫ್ ಸ್ಪಿನ್ನರ್ ಅನುಪಸ್ಥಿತಿಯಲ್ಲಿ ಕೆಕೆಆರ್ ತಂಡ ಆರ್ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧ ಭಾರೀ ಸೋಲು ಕಂಡಿತ್ತು.
ಐಪಿಎಲ್ನ ಶಂಕಾಸ್ಪದ ಶೈಲಿಯ ಬೌಲಿಂಗ್ ಆ್ಯಕ್ಷನ್ ಕಮಿಟಿಯಿಂದ ನರೇನ್ ದೋಷಮುಕ್ತರಾಗಿದ್ದು, ಆ ನಂತರ ನರೇನ್ ಅವರು ಐಪಿಎಲ್ನ ಎಚ್ಚರಿಕೆಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.
Next Story