ಪಾಂಡೆ- ಶಂಕರ್ ಅರ್ಧಶತಕ: ರಾಜಸ್ಥಾನ್ ವಿರುದ್ಧ ಹೈದರಾಬಾದ್ ಗೆ ಭರ್ಜರಿ ಗೆಲುವು
ದುಬೈ: ಮನೀಶ್ ಪಾಂಡೆ ಹಾಗೂ ವಿಜಯ್ ಶಂಕರ್ ಉತ್ತಮ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ 8 ವಿಕೆಟ್ ಗಳ ಭರ್ಜರಿ ಜಯಗಳಿಸಿದೆ.
ಗೆಲುವಿಗೆ 155 ರನ್ ಗುರಿ ಪಡೆದ ಹೈದರಾಬಾದ್ ತಂಡವು 18.1 ಓವರ್ ಗಳಲ್ಲಿ ಗೆಲುವಿನ ದಡ ತಲುಪಿತು. ಈ ಮೂಲಕ 10 ಪಂದ್ಯಗಳಲ್ಲಿ ನಾಲ್ಕನೇ ಗೆಲವು ಸಾಧಿಸಿತು. ರಾಜಸ್ಥಾನ್ ಕೂಡಾ 10 ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ಸಾಧಿಸಿದೆ.
ಹೈದರಾಬಾದ್ ಪರ ಮನೀಶ್ ಪಾಂಡೆ 47 ಎಸೆತಗಳಲ್ಲಿ 83 ಹಾಗೂ ವಿಜಯ್ ಶಂಕರ್ 51 ಎಸೆತಗಳಲ್ಲಿ 52 ರನ್ ಬಾರಿಸಿದರು. ರಾಜಸ್ಥಾನ್ ಪರ ಜೋಫ್ರಾ ಅರ್ಚರ್ ಎರಡು ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ನಿಗದಿತ 20 ಓವರ್ ಗಳಲ್ಲಿ 154/6 ರನ್ ಗಳಿಸಿತ್ತು.
Next Story