ಚಕ್ರವರ್ತಿ, ಕಮಿನ್ಸ್ ಮಾರಕ ದಾಳಿ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೆಕೆಆರ್ ಜಯಭೇರಿ
ಅಬುಧಾಬಿ: ವರುಣ್ ಚಕ್ರವರ್ತಿ ಹಾಗೂ ಪ್ಯಾಟ್ ಕಮಿನ್ಸ್ ಮಾರಕ ಬೌಲಿಂಗ್ ದಾಳಿಗೆ ಕಂಗಾಲಾದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್ 43ನೇ ಪಂದ್ಯದಲ್ಲಿ 59 ರನ್ ಗಳಿಂದ ಸೋತಿದೆ.
ಗೆಲುವಿಗೆ 195 ರನ್ ಗುರಿ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್ ಗಳಲ್ಲಿ 135 ರನ್ ಗಳಿಸಲಷ್ಟೇ ಶಕ್ತವಾಯಿತು. ಡೆಲ್ಲಿ ಪರ ನಾಯಕ ಶ್ರೇಯಸ್ ಅಯ್ಯರ್ 47, ರಿಷಬ್ ಪಂತ್ 27 ರನ್ ಬಾರಿಸಿದರು.
ಕೊಲ್ಕತ್ತಾ ಪರ ವರುಣ್ ಚಕ್ರವರ್ತಿ 20 ರನ್ ಗೆ 5 ವಿಕೆಟ್ ಹಾಗೂ ಪ್ಯಾಟ್ ಕಮಿನ್ಸ್ 17 ರನ್ ನೀಡಿ 3 ವಿಕೆಟ್ ಕಬಳಿಸಿದರು. ಫರ್ಗ್ಯೂಸನ್ 1 ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ನಿಗದಿತ 20 ಓವರ್ ಗಳಲ್ಲಿ 194-6 ರನ್ ಗಳಿಸಿತ್ತು. ಆರಂಭಿಕ ಆಟಗಾರ ನಿತೀಶ್ ರಾಣ 81 (53 ಎಸೆತ) ಸುನಿಲ್ ನರೇನ್ 64 (32 ಎಸೆತ) ರನ್ ಬಾರಿಸಿದರು.
Next Story