ವಿಯೆನ್ನಾ ಓಪನ್: ಥೀಮ್ ಕ್ವಾರ್ಟರ್ ಫೈನಲ್ಗೆ
ವಿಯೆನ್ನಾ, ಅ.30: ವಿಯೆನ್ನಾ ಓಪನ್ನಲ್ಲಿ ಡೊಮಿನಿಕ್ ಥೀಮ್ ಗುರುವಾರ ಕ್ರಿಸ್ಟಿಯನ್ ಗ್ಯಾರಿನ್ರನ್ನು 6-3, 6-2 ಸೆಟ್ಗಳಿಂದ ಮಣಿಸಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಕ್ವಾರ್ಟರ್ ಫೈನಲ್ನಲ್ಲಿ ಆಂಡ್ರೆ ರುಬ್ಲೆವ್ ಅವರನ್ನು ಥೀಮ್ ಎದುರಿಸಲಿದ್ದಾರೆ.
ಎರಡನೇ ಶ್ರೇಯಾಂಕಿತ ಹಾಲಿ ಚಾಂಪಿಯನ್ ಥೀಮ್ ಕೇವಲ ಒಂದು ಗಂಟೆಯಲ್ಲಿ ಗೆಲುವು ಸಾಧಿಸಿದರು.
‘‘ಇದು ನಿಜವಾದ ಉತ್ತಮ ಪಂದ್ಯವಾಗಿತ್ತು’’ ಎಂದು ಥೀಮ್ ಪಂದ್ಯದ ಬಳಿಕ ಹೇಳಿದರು.
ನಾಲ್ಕನೇ ಶ್ರೇಯಾಂಕದ ಡೇನಿಲ್ ಮೆಡ್ವೆಡೆವ್ ಅವರು ವಸೆಕ್ ಪೊಸ್ಪಿಸಿಲ್ ಅವರನ್ನು 4-6, 6-3, 6-2 ಮಣಿಸಿ ಮುಂದಿನ ಹಂತ ತಲುಪಿದರು. ಮೆಡ್ವೆಡೆವ್ ಅವರ ಮುಂದಿನ ಎದುರಾಳಿ ಕೆವಿನ್ ಆಂಡರ್ಸನ್ ಅವರು 2018 ರಲ್ಲಿ ಚಾಂಪಿಯನ್ ಆಗಿದ್ದರು.
ಲೊರೆಂಜೊ ಸೋನೆಗೊ 7-6 (6), 7-6 (2) ಅವರು ಹರ್ಬೆಟ್ ಹುರ್ಕೆಝ್ ಅವರನ್ನು ಸೋಲಿಸಿ ಕ್ವಾರ್ಟರ್ ಫೈನಲ್ ತಲುಪಿದರು. ಅವರಿಗೆ ಮುಂದಿನ ಪಂದ್ಯದಲ್ಲಿ ನೊವಾಕ್ ಜೊಕೊವಿಕ್ ಎದುರಾಳಿಯಾಗಿದ್ದಾರೆ.
ಆಸ್ಟ್ರಿಯಾದ ಜುರಿಜ್ ರೊಡಿಯೊನೊವ್ ಅವರನ್ನು 7-5, 6-3 ಸೆಟ್ಗಳಿಂದ ಸೋಲಿಸಿದ ಡೇನಿಯಲ್ ಇವಾನ್ಸ್ ಅವರು ಮುಂದಿನ ಪಂದ್ಯದಲ್ಲಿ ಬ್ರಿಟನ್ ಮುಂದಿನ ಮೂರನೇ ಶ್ರೇಯಾಂಕಿತ ಸ್ಟೆಫಾನೊಸ್ ಸಿಟ್ಸಿಪಾಸ್ ಅಥವಾ ಗ್ರಿಗರ್ ಡಿಮಿಟ್ರೋವ್ ಅವರನ್ನು ಎದುರಿಸಲಿದ್ದಾರೆ.