ಚೊಚ್ಚಲ ಏಕದಿನ ಪಂದ್ಯದಲ್ಲಿ ಶತಕ ದಾಖಲಿಸಿದ ಮೊದಲ ಭಾರತೀಯ ಬ್ಯಾಟ್ಸ್ಮನ್ ರಾಹುಲ್
ಹರಾರೆ, ಜೂ.12: ಕನ್ನಡಿಗ ಲೋಕೇಶ್ ರಾಹುಲ್ ಶನಿವಾರ ಹರಾರೆಯಲ್ಲಿ ನಡೆದ ಝಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶತಕ(100) ದಾಖಲಿಸುವ ಮೂಲಕ ಆಡಿದ ಚೊಚ್ಚಲ ಪಂದ್ಯದಲ್ಲಿ ಶತಕ ದಾಖಲಿಸಿದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.
176 ನಿಮಿಷಗಳ ಬ್ಯಾಟಿಂಗ್ನಲ್ಲಿ ರಾಹುಲ್ 115 ಎಸೆತಗಳನ್ನು ಎದುರಿಸಿ 7 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ ಶತಕ ತಲುಪಿದರು.ಭಾರತ ಈ ಪಂದ್ಯದಲ್ಲಿ 9 ವಿಕೆಟ್ಗಳ ಜಯ ಗಳಿಸಿತು.
ಚೊಚ್ಚಲ ಏಕದಿನ ಪಂದ್ಯದಲ್ಲಿ ಗರಿಷ್ಠ ರನ್ ದಾಖಲಿಸಿದ ಭಾರತೀಯರು
ಆಟಗಾರ ರನ್ ಎಸೆತ ಎದುರಾಳಿ ತಂಡಸ್ಥಳ ದಿನಾಂಕ
ರಾಹುಲ್ 100* 115 ಝಿಂಬಾಬ್ವೆ ಹರಾರೆ ಜೂ.11,2016
ಉತ್ತಪ್ಪ 086 096 ಇಂಗ್ಲೆಂಡ್ ಇಂದೋರ್ ಎ.15, 2006
ಬಿ. ಪಟೇಲ್ 082 078 ಇಂಗ್ಲೆಂಡ್ ಲೀಡ್ಸ್ ಜೂ.13,1974
ಸಿದ್ದು 073 079 ಆಸ್ಟ್ರೇಲಿಯ ಚೆನ್ನೈ ಅ.09, 1987
ಎಂ.ಪಾಂಡ್ಯ 071 086 ಝಿಂಬಾಬ್ವೆ ಹರಾರೆ ಜು.14,2015