--

ವೈಟ್‌ವಾಶ್ ತಪ್ಪಿಸಲು ಟೀಮ್ ಇಂಡಿಯಾದ ಪ್ರಯತ್ನ

ಇಂದು ಭಾರತ-ಆಸ್ಟ್ರೇಲಿಯ ಅಂತಿಮ ಏಕದಿನ ಪಂದ್ಯ

ಕ್ಯಾನ್ಬೆರಾ,: ಆತಿಥೇಯ ಆಸ್ಟ್ರೇಲಿಯ ವಿರುದ್ಧ ಮೊದಲ ಎರಡು ಐಕದಿನ ಪಂದ್ಯಗಳಲ್ಲಿ ಸೋಲು ಅನುಭವಿಸಿ, ಸರಣಿಯನ್ನು ಕಳೆದುಕೊಂಡಿರುವ ಟೀಮ್ ಇಂಡಿಯಾ ಬುಧವಾರ ಇಲ್ಲಿ ನಡೆಯುವ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಗೆಲುವಿನ ಪ್ರಯತ್ನ ನಡೆಸಲಿದೆ.

ಸತತ ಎರಡನೇ ಕ್ಲೀನ್‌ಸ್ವೀಪ್‌ನ್ನು ತಪ್ಪಿಸಲು ಭಾರತದ ನಾಯಕ ವಿರಾಟ್ ಕೊಹ್ಲಿ ತಂಡದ ಬೌಲಿಂಗ್ ಸಂಯೋಜನೆಯನ್ನು ಬದಲಾಯಿಸ ಬೇಕಾಗಿದೆ.

ಈ ವರ್ಷದ ಆರಂಭದಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ 0-3 ಅಂತರದಲ್ಲಿ ಸರಣಿ ಸೋತಿದ್ದ ಭಾರತ ಅಂತಿಮ ಏಕದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ ಇನ್ನ್ನೊಂದು 0-3 ಸೋಲನ್ನು ತಪ್ಪಿಸಬೇಕಾಗಿದೆ. ‘‘ಮುಂದಿನ ಪಂದ್ಯವನ್ನು ಗೆಲ್ಲುವ ದೃಢ ನಿಶ್ಚಯವನ್ನು ಮಾಡಿದ್ದೇವೆ. ಕ್ಲೀನ್ ಸ್ವೀಪ್‌ಗೆ ಆಸ್ಟ್ರೇಲಿಯಕ್ಕೆ ಅವಕಾಶ ನೀಡುವುದಿಲ್ಲ’’ ಎಂದು ಅಗ್ರಸರದಿಯ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಹೇಳಿದರು.

 ‘‘ನಮ್ಮ ಬೌಲರ್‌ಗಳು ತಮ್ಮ ಕೆಲಸದ ನೀತಿಯೊಂದಿಗೆ ನಿಜವಾಗಿಯೂ ಸಕಾರಾತ್ಮಕವಾಗಿದ್ದಾರೆ ಮತ್ತು ತರಬೇತಿಯ ಸಮಯದಲ್ಲಿ ಕೆಲವು ಬೌಲರ್‌ಗಳು ಕೆಲವು ಯೋಜನೆಗಳೊಂದಿಗೆ ಅಭ್ಯಾಸ ಮಾಡುತ್ತಿದ್ದಾರೆ’’ ಎಂದು ಅವರು ಹೇಳಿದರು.

 ಮೊದಲ ಎರಡು ಪಂದ್ಯಗಳಲ್ಲಿ ರನ್ ಹೊಳೆ ಹರಿದಿತ್ತು. ಆಸ್ಟ್ರೇಲಿಯ ಎರಡೂ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ನೇತೃತ್ವವನ್ನು ಮೀರಿಸಿತ್ತು. ಟ್ವೆಂಟಿ -20 ಸರಣಿಗೆ ಹೋಗುವ ಮುನ್ನ ಸುಂದರವಾದ ಮನುಕಾ ಓವಲ್‌ನಲ್ಲಿ ನಡೆಯುವ ಅಂತಿಮ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ತಂಡದ ಆತ್ಮವಿಶ್ವಾಸ ಹೆಚ್ಚಲು ಸಾಧ್ಯ.

ಆಸ್ಟ್ರೇಲಿಯ ಗೆಲುವಿನ ಅಭಿಯಾನವನ್ನು ಮುಂದುವರಿಸಲು ನೋಡುತ್ತಿದೆ. ಆದರೆ ಅದನ್ನು ತಡೆಯಲು ಭಾರತದ ತಂಡದ ರಣತಂತ್ರ ಯಾವ ರೀತಿ ಎನ್ನುವುದು ಸ್ಪಷ್ಟಗೊಂಡಿಲ್ಲ. ಮೊದಲ ಬಾರಿ ಆಸ್ಟ್ರೇಲಿಯ ಪ್ರವಾಸ ಕೈಗೊಂಡಿರುವ ವೇಗದ ಬೌಲರ್ ನವದೀಪ್ ಸೈನಿಗೆ ಯಾವುದೇ ಹಿಡಿತ ಇಲ್ಲದಂತಾಗಿದೆ.

ಕಳೆದ ಪಂದ್ಯದಲ್ಲಿ ಸೈನಿ ಏಳು ಓವರ್‌ಗಳಲ್ಲಿ 70 ರನ್‌ಗಳನ್ನು ಬಿಟ್ಟುಕೊಟ್ಟರು. ಇದರಿಂದಾಗಿ ನಾಯಕ ಕೊಹ್ಲಿ ಅವರು ಇನ್ನೂ ಪೂರ್ಣವಾಗಿ ಫಿಟ್‌ನೆಸ್ ಸಮಸ್ಯೆಯಿಂದ ಹೊರ ಬಾರದ ಹಾರ್ದಿಕ್ ಪಾಂಡ್ಯ ಮತ್ತು ಮಯಾಂಕ್ ಅಗರ್ವಾಲ್ ಅವರನ್ನು ಬೌಲಿಂಗ್‌ಗೆ ಅನಿವಾರ್ಯವಾಗಿ ಇಳಿಸಬೇಕಾಯಿತು.

 27 ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ ಆಡಿರುವ ಅನುಭವ ಹೊಂದಿರುವ ಶಾರ್ದುಲ್ ಠಾಕೂರ್ ಅಥವಾ ‘ಯಾರ್ಕರ್ ಸೆನ್ಸೇಷನ್’ ಎಡಗೈ ವೇಗಿ ಟಿ. ನಟರಾಜನ್ ಇವರಲ್ಲಿ ಒಬ್ಬರು ಸೈನಿ ಬದಲಿಗೆ ಅಂತಿಮ ಪಂದ್ಯದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ನಟರಾಜನ್ ಚೊಚ್ಚಲ ಅಂತರ್‌ರಾಷ್ಟ್ರೀಯ ಪಂದ್ಯವನ್ನು ಆಡಲು ನೋಡುತ್ತಿದ್ದಾರೆ. ಟ್ವೆಂಟಿ-20 ಸರಣಿಯ ಮೊದಲು ತಮ್ಮನ್ನು ತಾವು ಪರೀಕ್ಷಿಸಿಕೊಳ್ಳುವ ಅವಕಾಶ ನಟರಾಜನ್‌ಗೆ ಒಲಿದು ಬರುವ ಸಾಧ್ಯತೆ ಇದೆ. ಟೆಸ್ಟ್ ಸರಣಿಗೆ ಫಿಟ್ ಮತ್ತು ಫ್ರೆಶ್ ಆಗಿ ಉಳಿಯಬೇಕಾದ ಜಸ್‌ಪ್ರೀತ್ ಬುಮ್ರಾ ಮತ್ತು ಮುಹಮ್ಮದ್ ಶಮಿ ಇಬ್ಬರಿಗೂ ವಿಶ್ರಾಂತಿ ನೀಡಲು ಕೊಹ್ಲಿ ನಿರ್ಧರಿಸಿದಲ್ಲಿ ಶಾರ್ದುಲ್ ಮತ್ತು ನಟರಾಜನ್ ಇಬ್ಬರಿಗೂ ಅವಕಾಶ ಸಿಗಬಹದು.

ನಟರಾಜನ್ ವೇಗದ ಬೌಲಿಂಗ್‌ನಲ್ಲಿ ವಿಭಿನ್ನ ಆಯಾಮವನ್ನು ಒದಗಿಸಬಲ್ಲರು. ಎರಡು ಪಂದ್ಯಗಳಲ್ಲಿ ಭಾರತದ ದಾಳಿಯು ಅತ್ಯಂತ ಕಳಪೆಯಾಗಿತ್ತು. 69 ಬೌಂಡರಿಗಳು ಮತ್ತು 19 ಸಿಕ್ಸರ್‌ಗಳು ಎರಡು ಪಂದ್ಯಗಳಲ್ಲಿ ದಾಖಲಾಗಿವೆ.

ಟೀಮ್ ಇಂಡಿಯಾದ ಸಿಡ್ನಿಯ ಸೋಲು ಮತ್ತೆ ನಾಯಕತ್ವದ ಬದಲಾವಣೆಯ ಚರ್ಚೆಗೆ ನಾಂದಿ ಹಾಡಿದೆ. ಸ್ಟೀವ್ ಸ್ಮಿತ್‌ಗೆ ಬ್ಯಾಟಿಂಗ್‌ಗೆ ಹೇಗೆ ಕಡಿವಾಣ ಹಾಕಬೇಕೆಂದು ಭಾರತದ ಬೌಲರ್‌ಗಳಿಗೆ ತಿಳಿದಿಲ್ಲ. ಅವರು ಏಕಾಂಗಿಯಾಗಿ ಭಾರತವನ್ನು ಎದುರಿಸಲು ನಿರ್ಧರಿಸಿದ್ದಾರೆ. ಸತತ ಎರಡು ಪಂದ್ಯಗಳಲ್ಲಿ ಶತಕ ದಾಖಲಿಸಿರುವ ಸ್ಮಿತ್ ಇನ್ನೊಂದು ಶತಕ ದಾಖಲಿಸಲು ನೋಡುತ್ತಿದ್ದಾರೆ.

ಭಾರತದ ನಾಯಕನ ಆತುರದ ಬೌಲಿಂಗ್ ಬದಲಾವಣೆಯನ್ನು ಮಾಜಿ ಆಟಗಾರರಾದ ಗೌತಮ್ ಗಂಭೀರ್ ಮತ್ತು ಆಶಿಶ್ ನೆಹ್ರಾ ಅವರು ಟೀಕಿಸಿದ್ದಾರೆ. ವೇಗಿಗಳು ಕೈ ಸುಟ್ಟು ಕೊಂಡಿದ್ದರೆ ಸ್ಪಿನ್ನರ್‌ಗಳು ತಮ್ಮ ಅಸಮರ್ಪಕ ಪ್ರದರ್ಶನ ನೀಡಿರುವುದು ತಂಡಕ್ಕೆ ತಲೆ ನೋವು ತಂದಿದೆ.

 ಯಜುವೇಂದ್ರ ಚಹಾಲ್ ಮೊದಲ ಎರಡು ಪಂದ್ಯಗಳಲ್ಲಿ ಅತ್ಯಂತ ದುಬಾರಿ ಬೌಲರ್ ಎನಿಸಿಕೊಂಡಿದ್ದಾರೆ. 19 ಓವರ್‌ಗಳಲ್ಲಿ 160 ರನ್ ಬಿಟ್ಟುಕೊಟ್ಟಿದ್ದಾರೆ. ಕೇವಲ ಒಂದು ವಿಕೆಟ್ ಪಡೆದಿದ್ದಾರೆ. ಮತ್ತೊಂದೆಡೆ ರವೀಂದ್ರ ಜಡೇಜ ಎರಡು ಪಂದ್ಯಗಳಲ್ಲಿ ವಿಕೆಟ್ ಪಡೆಯದಿದ್ದರೂ, ಬೌಲಿಂಗ್‌ನಲ್ಲಿ ಹೆಚ್ಚು ರನ್ ಬಿಟ್ಟುಕೊಟ್ಟಿಲ್ಲ. ನಾಯಕ ಕೊಹ್ಲಿ ಮತ್ತು ಉಪನಾಯಕ ರಾಹುಲ್ ಎರಡನೇ ಪಂದ್ಯದಲ್ಲಿ ಚೆನ್ನಾಗಿ ಆಡಿದ್ದಾರೆ. ಎರಡೂ ಪಂದ್ಯಗಳಲ್ಲಿ 335 ರಿಂದ 340 ರ ಗುರಿಯನ್ನು ಪಡೆದಿದ್ದರೆ ಭಾರತಕ್ಕೆ ಗೆಲುವಿನ ಸವಾಲನ್ನು ಬೆನ್ನಟ್ಟಲು ಸಾಧ್ಯವಿತ್ತು ಎನ್ನುವುದು ಗೊತ್ತಗಿದೆ.

  ಭಾರತ: ವಿರಾಟ್ ಕೊಹ್ಲಿ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ ಮತ್ತು ವಿಕೆಟ್ ಕೀಪರ್),ಶಿಖರ್ ಧವನ್, ಶುಭ್‌ಮನ್ ಗಿಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಮಯಾಂಕ್ ಅಗರ್ವಾಲ್, ರವೀಂದ್ರ ಜಡೇಜ, ಯಜುವೇಂದ್ರ ಚಹಾಲ್, ಕುಲದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ, ಮುಹಮ್ಮದ್ ಶಮಿ, ನವದೀಪ್ ಸೈನಿ, ಶಾರ್ದುಲ್ ಠಾಕೂರ್, ಟಿ.ನಟರಾಜನ್

  ಆಸ್ಟ್ರೇಲಿಯ: ಆ್ಯರನ್ ಫಿಂಚ್ (ನಾಯಕ ), ಡಿ’ಆರ್ಸಿ ಶಾರ್ಟ್, ಸ್ಟೀವ್ ಸ್ಮಿತ್, ಮಾರ್ನಸ್ ಲ್ಯಾಬುಶಾನೆ, ಗ್ಲೆನ್ ಮ್ಯಾಕ್ಸ್‌ವೆಲ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಆ್ಯಡಮ್ ಝಾಂಪ, ಜೋಶ್ ಹೇರಲ್‌ವುಡ್, ಸೀನ್ ಅಬಾಟ್, ಆಷ್ಟನ್ ಅಗರ್, ಕ್ಯಾಮೆರಾನ್ ಗ್ರೀನ್, ಮೊಯ್ಸಿಸ್ ಹೆನ್ರಿಕ್ಸ್, ಆಂಡ್ರೂ ಟೈ, ಡೇನಿಯಲ್ ಸ್ಯಾಮ್ಸ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್).

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top