ಐಎಸ್ ಎಲ್: ಗೋವಾಕ್ಕೆ ಜಯ
ಪಣಜಿ: ಇಗೊರ್ ಅಂಗುಲೊ ಗಳಿಸಿದ ಅವಳಿ ಗೋಲುಗಳ ನೆರವಿನಿಂದ ಗೋವಾ ಎಫ್ ಸಿ ಜೆಮ್ಶೆಡ್ ಪುರ ವಿರುದ್ಧ ಬುದವಾರ ನಡೆದ ಐಎಸ್ ಎಲ್ ಪಂದ್ಯದಲ್ಲಿ 2-1 ಅಂತರದಿಂದ ಜಯ ಸಾಧಿಸಿತು.
ಮೊದಲಾರ್ಧದಲ್ಲಿ 1-0 ಮುನ್ನಡೆ ಸಾಧಿಸಿದ ಜೆಮ್ಶೆಡ್ ಪುರ ಆರಂಭದಲ್ಲಿ ಪ್ರಾಬಲ್ಯ ಸಾಧಿಸಿತ್ತು. ಜೆಮ್ಶೆಡ್ ಪುರ ಪರ 33ನೇ ನಿಮಿಷದಲ್ಲಿ ಸ್ಟೀಫನ್ ಏಝೊ ಗೋಲು ದಾಖಲಿಸಿದರು.
ದ್ವಿತೀಯಾರ್ಧದಲ್ಲಿ ಗೋವಾ ತಿರುಗೇಟು ನೀಡಿತು. ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ 63ನೇ ನಿಮಿಷದಲ್ಲಿ ಗೋಲು ಗಳಿಸಿದ ಇಗೊರ್ ಸ್ಕೋರನ್ನು 1-1ರಿಂದ ಸಮಬಲಗೊಳಿಸಿದರು. 90+5ನೇ ನಿಮಷದಲ್ಲಿ ಮತ್ತೊಂದು ಗೋಲು ಗಳಿಸಿದ ಇಗೊರ್ ಗೋವಾ ಗೆಲುವನ್ನು ಖಾತ್ರಿಪಡಿಸಿದರು.
Next Story