ಎರಡನೇ ಟೆಸ್ಟ್: ಬುಮ್ರಾ ಬಿರುಗಾಳಿಗೆ ಆಸ್ಟ್ರೇಲಿಯ ತತ್ತರ
ಮೆಲ್ಬೋರ್ನ್: ಜಸ್ಪ್ರೀತ್ ಬುಮ್ರಾ ನೇತೃತ್ವದ ಭಾರತದ ಬೌಲರ್ಗಳ ಶಿಸ್ತುಬದ್ಧ ದಾಳಿಗೆ ತತ್ತರಿಸಿದ ಆತಿಥೇಯ ಆಸ್ಟ್ರೇಲಿಯ ತಂಡ ಶನಿವಾರ ಇಲ್ಲಿ ಆರಂಭವಾದ ಎರಡನೇ ಟೆಸ್ಟ್ನ ಮೊದಲ ದಿನ ಕೇವಲ 195 ರನ್ಗೆ ಆಲೌಟಾಗಿದೆ.
ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯ ಮೊದಲ ಇನಿಂಗ್ಸ್ನಲ್ಲಿ 72.3 ಓವರ್ಗಳಲ್ಲಿ 195 ರನ್ ಗಳಿಸಿ ಆಲೌಟಾಯತು.
ಭಾರತದ ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ(4-56)ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರೆ, ಆರ್.ಅಶ್ವಿನ್(3-35),ಚೊಚ್ಚಲ ಪಂದ್ಯವನ್ನಾಡಿದ ಮುಹಮ್ಮದ್ ಸಿರಾಜ್(2-40) ಹಾಗೂ ರವೀಂದ್ರ ಜಡೇಜ(1-15) ಉಳಿದ ವಿಕೆಟ್ಗಳನ್ನು ಉರುಳಿಸಿದರು.
ಆಸ್ಟ್ರೇಲಿಯದ ಪರ ಲ್ಯಾಬುಶೇನ್(48, 132 ಎಸೆತ, 4 ಬೌಂಡರಿ) ಅಗ್ರ ಸ್ಕೋರರ್ ಎನಿಸಿಕೊಂಡರು. ಟ್ರಾವಿಸ್ ಹೆಡ್(38), ಮ್ಯಾಥ್ಯೂ ವೇಡ್(30)ಹಾಗೂ ನಥಾನ್ ಲಿಯೊನ್(20)ಎರಡಂಕೆಯ ಸ್ಕೋರ್ ಗಳಿಸಿದರು.
Next Story