ಐಎಸ್ ಎಲ್: ಈಸ್ಟ್ ಬಂಗಾಳ-ಚೆನ್ನೈಯಿನ್ ಪಂದ್ಯ ಡ್ರಾ
ವಾಸ್ಕೊ: ಜರ್ಮನಿಯ ಸ್ಟ್ರೈಕರ್ ಮಟ್ಟಿ ಸ್ಟೆನ್ಮನ್ ಅವಳಿ ಗೋಲು ನೆರವಿನಿಂದ ಈಸ್ಟ್ ಬಂಗಾಳ ಎಫ್ ಸಿ ಎರಡು ಬಾರಿಯ ಚಾಂಪಿಯನ್ ಚೆನ್ನೈಯಿನ್ ಎಫ್ ಸಿ ವಿರುದ್ಧ ಶನಿವಾರ ನಡೆದ ಐಎಸ್ ಎಲ್ ಪಂದ್ಯದಲ್ಲಿ 2-2 ಗೋಲುಗಳ ಅಂತರದಿಂದ ಡ್ರಾ ಸಾಧಿಸಿದೆ.
ಈಸ್ಟ್ ಬಂಗಾಳ ಮೂರನೇ ಬಾರಿ ಡ್ರಾ ಸಾಧಿಸಿದೆ. ಚೆನ್ನೈಯಿನ್ 13ನೇ ನಿಮಿಷದಲ್ಲಿ ಲಾಲಿಯಾಂಝುಲಾ ಚಾಂಗ್ಟೆ ದಾಖಲಿಸಿದ ಗೋಲು ನೆರವಿನಿಂದ 1-0 ಮುನ್ನಡೆ ಸಾಧಿಸಿತು. 59ನೇ ನಿಮಿಷದಲ್ಲಿ ಗೋಲು ಗಳಿಸಿದ ಸ್ಟೆನ್ಮನ್ 1-1ರಿಂದ ಸಮಬಲ ಸಾಧಿಸಲು ನೆರವಾದರು.
64ನೇ ನಿಮಿಷದಲ್ಲಿ ರಹೀಮ್ ಅಲಿ ಗಳಿಸಿದ ಗೋಲು ನೆರವಿನಿಂದ ಚೆನ್ನೈಯಿನ್ ಮತ್ತೊಮ್ಮೆ ಮುನ್ನಡೆ ಪಡೆಯಿತು. ಸ್ಟೆನ್ಮನ್ 68ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿ 2-2 ರಿಂದ ಸಮಬಲ ಸಾಧಿಸಲು ಕಾಣಿಕೆ ನೀಡಿದರು.
ಈಸ್ಟ್ ಬಂಗಾಳ ಈ ತನಕ ಗೆಲುವು ಸಾಧಿಸಲು ವಿಫಲವಾಗಿದ್ದು, ಕೇವಲ 3 ಅಂಕ ಗಳಿಸಿದೆ.
Next Story