ದ್ವಿತೀಯ ಟೆಸ್ಟ್: ಗೆಲುವಿನ ಹೊಸ್ತಿಲಲ್ಲಿ ಭಾರತ
ಆಸ್ಟ್ರೇಲಿಯ ಎರಡನೇ ಇನಿಂಗ್ಸ್ನಲ್ಲಿ 133/6
ಮೆಲ್ಬೋರ್ನ್: ಮೊದಲ ಇನಿಂಗ್ಸ್ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯ ತಂಡ ದ್ವಿತೀಯ ಟೆಸ್ಟ್ನ ಮೂರನೇ ದಿನದಾಟದ ಮುಕ್ತಾಯಕ್ಕೆ 66 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿದೆ. ಭಾರತದ ಗೆಲುವಿಗೆ ಕಠಿಣ ಸವಾಲು ನೀಡಬೇಕಾದ ಒತ್ತಡದಲ್ಲಿದೆ. ಸದ್ಯ ಆಸ್ಟ್ರೇಲಿಯ 2 ರನ್ ಮುನ್ನಡೆಯಲ್ಲಿದೆ.ಭಾರತ ಗೆಲುವಿನ ಹೊಸ್ತಿಲಲ್ಲಿದೆ.
ಭಾರತವನ್ನು 326 ರನ್ಗೆ ನಿಯಂತ್ರಿಸಿದ ಹೊರತಾಗಿಯೂ 131 ರನ್ ಹಿನ್ನಡೆ ಕಂಡಿದ್ದ ಆಸ್ಟ್ರೇಲಿಯ ಎರಡನೇ ಇನಿಂಗ್ಸ್ನಲ್ಲಿ ಮತ್ತೊಂದು ಕರಾರುವಾಕ್ ಬೌಲಿಂಗ್ ಮಾಡಿದ ಭಾರತದ ಬೌಲರ್ಗಳಿಗೆ ತತ್ತರಿಸಿ ಆರಂಭಿಕ ಆಘಾತಕ್ಕೊಳಗಾಯಿತು. 99 ರನ್ಗೆ 6 ವಿಕೆಟ್ಗಳನ್ನು ಕಳೆದುಕೊಂಡು ಹಿನ್ನಡೆ ಕಂಡಿತು. ಕ್ಯಾಮರೂನ್ ಗ್ರೀನ್(17) ಹಾಗೂ ಪ್ಯಾಟ್ ಕಮಿನ್ಸ್(15)7ನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 34 ರನ್ ಸೇರಿಸಿದ್ದಾರೆ.
ಆಸ್ಟ್ರೇಲಿಯದ ಎರಡನೇ ಇನಿಂಗ್ಸ್ನಲ್ಲಿ ಆರಂಭಿಕ ಬ್ಯಾಟ್ಸ್ಮನ್ ಮ್ಯಾಥ್ಯೂ ವೇಡ್(40)ಅಗ್ರಸ್ಕೋರರ್ ಎನಿಸಿಕೊಂಡರು. ಲ್ಯಾಬುಶೇನ್(28), ಹೆಡ್(17) ಎರಡಂಕೆಯ ಸ್ಕೋರ್ ಗಳಿಸಿದರು. ಸ್ಪಿನ್ನರ್ ರವೀಂದ್ರ ಜಡೇಜ(2-25) ಎರಡು ವಿಕೆಟ್ ಪಡೆದರೆ, ಬುಮ್ರಾ(1-34), ಉಮೇಶ್ ಯಾದವ್(1-5), ಸಿರಾಜ್(1-23) ಹಾಗೂ ಅಶ್ವಿನ್(1-46)ತಲಾ ಒಂದು ವಿಕೆಟ್ ಪಡೆದರು.