ಐಎಸ್ ಎಲ್: ಜಮ್ಶೆಡ್ಪುರಕ್ಕೆ ರೋಚಕ ಜಯ
ಫರ್ಟೋಡ: ಸ್ಟೀಫನ್ ಏಝ್ 79ನೇ ನಿಮಿಷದಲ್ಲಿ ಹೆಡರ್ ನ ಮೂಲಕ ದಾಖಲಿಸಿದ ಆಕರ್ಷಕ ಗೋಲಿನ ನೆರವಿನಿಂದ ಜಮ್ಶೆಡ್ಪುರ ಎಫ್ ಸಿ ಸೋಮವಾರ ನಡೆದ ಐಎಸ್ ಎಲ್ ಪಂದ್ಯದಲ್ಲಿ ಬೆಂಗಳೂರು ಎಫ್ ಸಿ ವಿರುದ್ಧ 1-0 ಗೋಲುಗಳ ಅಂತರದಿಂದ ರೋಚಕ ಜಯ ದಾಖಲಿಸಿತು.
ಮೊದಲಾರ್ಧದ ಅಂತ್ಯಕ್ಕೆ ಉಭಯ ತಂಡಗಳು ಗೋಲು ಗಳಿಸಲು ವಿಫಲವಾದವು. 79ನೇ ನಿಮಿಷದಲ್ಲಿ ಸ್ಟೀಫನ್ ಜಮ್ಶೆಡ್ಪುರದ ಪರ ಗೆಲುವಿನ ಗೋಲು ದಾಖಲಿಸಿದರು. ಈ ಗೆಲುವಿನ ಮೂಲಕ ಜಮ್ಶೆಡ್ಪುರ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಪಂದ್ಯವನ್ನು ಡ್ರಾ ಗೊಳಿಸುವ ಅವಕಾಶ ಕೈಚೆಲ್ಲಿದ ಬೆಂಗಳೂರು ಎಫ್ ಸಿ ಸತತ ಎರಡನೇ ಸೋಲು ಕಂಡಿತು.
Next Story