ಟೀಮ್ ಇಂಡಿಯಾದಲ್ಲಿ ಮತ್ತೆ ಗಾಯದ ಸಮಸ್ಯೆ: ಬೌಲಿಂಗ್ ಮಾಡಿದ ರೋಹಿತ್ ಶರ್ಮಾ
ಮೆಲ್ಬರ್ನ್,ಜ.15: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತೀಯ ಕ್ರಿಕೆಟ್ ತಂಡಕ್ಕೆ ಪ್ರತೀ ಪಂದ್ಯಾಟದಲ್ಲೂ ಗಾಯದ ಸಮಸ್ಯೆ ಎದುರಾಗುತ್ತಿದೆ. ಈಗಾಗಲೇ ಪ್ರಮುಖ ಬೌಲರ್ ಮುಹಮ್ಮದ್ ಶಮಿ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದು, ಇದೀಗ ನಾಲ್ಕನೇ ಟೆಸ್ಟ್ ಪಂದ್ಯಾಟದ ನಡುವೆ ಇನ್ನೋರ್ವ ಪ್ರಮುಖ ಬೌಲರ್ ನವದೀಪ್ ಸೈನಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬೌಲಿಂಗ್ ನ ಮಧ್ಯೆ ನವದೀಪ್ ಸೈನಿ ಅಸ್ವಸ್ಥರಾದಂತೆ ಕಂಡು ಬಂದಿದ್ದು, ಕೂಡಲೇ ತಂಡದ ಫಿಸಿಯೋ ನಿತಿನ್ ಪಟೇಲ್ ಮೈದಾನಕ್ಕೆ ಆಗಮಿಸಿ ಅವರನ್ನು ಕರೆದೊಯ್ದರು. ಈ ವೇಳೆ ಸೈನಿಯ ಓವರ್ ಪೂರ್ತಿಗೊಳಿಸಲು ರೋಹಿತ್ ಶರ್ಮಾ ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಸಾಮಾನ್ಯವಾಗಿ ಬೌಲಿಂಗ್ ಗೆ ಅವಕಾಶ ಸಿಕ್ಕಿದಾಗಲೆಲ್ಲಾ ಆಫ್ ಸ್ಪಿನ್ ಎಸೆಯುತ್ತಿದ್ದ ರೋಹಿತ್ ಮಧ್ಯಮ ವೇಗದ ಬೌಲಿಂಗ್ ಮಾಡಿದ್ದಾರೆ.
ರೋಹಿತ್ ಶರ್ಮಾ ಬೌಲಿಂಗ್ ಮಾಡುವ ವೀಡಿಯೋವನ್ನು ತನ್ನ ಟ್ವಿಟರ್ ಖಾತೆಯಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಹಂಚಿಕೊಂಡಿದೆ. ಸದ್ಯ ಭಾರತೀಯ ತಂಡದಲ್ಲಿ ಗಾಯಾಳುಗಳ ಸಮಸ್ಯೆ ಹೆಚ್ಚಿದ್ದು, ಇರುವ ಆಟಗಾರರನ್ನು ಹೊಂದಿಸಿಕೊಂಡು ತಂಡವು ಮುನ್ನಡೆಯುತ್ತಿದೆ.
Into the attack: Rohit Sharma from the Vulture St End!
— cricket.com.au (@cricketcomau) January 15, 2021
Live #AUSvIND: https://t.co/IzttOVtrUu pic.twitter.com/qHDvLMZCSO