ಹಾರ್ದಿಕ್, ಕೃನಾಲ್ ಪಾಂಡ್ಯ ಅವರ ತಂದೆ ನಿಧನ, ಕೊಹ್ಲಿ, ಪಠಾಣ್ ಸಂತಾಪ
ಅಹ್ಮದಾಬಾದ್: ಭಾರತದ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ ಅವರ ತಂದೆ ಹಿಮಾಂಶು ಪಾಂಡ್ಯ ಹೃದಯಸ್ತಂಭನದಿಂದ ಶನಿವಾರ ನಿಧನರಾಗಿದ್ದು, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮಾಜಿ ಆಲ್ ರೌಂಡರ್ ಇರ್ಫಾನ್ ಪಠಾಣ್ ಸಹಿತ ಹಲವು ಕ್ರಿಕೆಟಿಗರು ಪಾಂಡ್ಯ ಸಹೋದರರ ತಂದೆಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಈಗ ನಡೆಯುತ್ತಿರುವ ಸಯ್ಯದ್ ಮುಷ್ತಾಕ್ ಅಲಿ ಟ್ವೆಂಟಿ-20 ಟೂರ್ನಿಯಲ್ಲಿ ಬರೋಡಾ ತಂಡದ ನಾಯಕನಾಗಿರುವ ಕೃನಾಲ್ ತನ್ನ ತಂದೆಯ ನಿಧನದ ಸುದ್ದಿ ಕೇಳಿದ ತಕ್ಷಣ ತಂಡದ ಶಿಬಿರವನ್ನು ತೊರೆದು ಮನೆಗೆ ಧಾವಿಸಿದ್ದಾರೆ. ಕೃನಾಲ್ ಟೂರ್ನಿಯಲ್ಲಿ ಈ ತನಕ 3 ಪಂದ್ಯಗಳಲ್ಲಿ ಆಡಿದ್ದು 4 ವಿಕೆಟ್ ಗಳನ್ನು ಪಡೆದಿದ್ದಾರೆ.
ಹಾರ್ದಿಕ್ ಪಾಂಡ್ಯ ಈಗ ನಡೆಯುತ್ತಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡುತ್ತಿಲ್ಲ. ಮುಂಬರುವ ಇಂಗ್ಲೆಂಡ್ ವಿರುದ್ಧ ಸ್ವದೇಶದಲ್ಲಿ ನಡೆಯಲಿರುವ ಟೆಸ್ಟ್ ಸರಣಿಗಾಗಿ ತಯಾರಿ ನಡೆಸುತ್ತಿದ್ದಾರೆ.
Next Story