ರಾಜಸ್ಥಾನ ರಾಯಲ್ಸ್ ಕ್ರಿಕೆಟ್ ನಿರ್ದೇಶಕರಾಗಿ ಕುಮಾರ ಸಂಗಕ್ಕರ ನೇಮಕ
ಹೊಸದಿಲ್ಲಿ: ಕುಮಾರ ಸಂಗಕ್ಕರ ಅವರನ್ನು ತಂಡದ ಕ್ರಿಕೆಟ್ ನಿರ್ದೇಶಕರನ್ನಾಗಿ ನೇಮಿಸಲಾಗಿದೆ ಎಂದು ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿ ರಾಜಸ್ಥಾನ ರಾಯಲ್ಸ್ ರವಿವಾರ ಪ್ರಕಟಿಸಿದೆ.
ರಾಜಸ್ಥಾನ ಮೂಲದ ಫ್ರಾಂಚೈಸಿ ಟ್ವಿಟರ್ ಮೂಲಕ ಈ ಸುದ್ದಿಯನ್ನು ಹಂಚಿಕೊಂಡಿದೆ.
ಶ್ರೀಲಂಕಾದ ಮಾಜಿ ಕ್ರಿಕೆಟಿಗನನ್ನು ದಂತಕತೆ ಎಂದು ಪ್ರಶಂಸಿಸಿದ ರಾಜಸ್ಥಾನ ರಾಯಲ್ಸ್, ರಾಯಲ್ಸ್ ಪರಿವಾರಕ್ಕೆ ಕೆಲವು ದಂತಕತೆಗಳನ್ನುಸೇರಿಸಲಾಗಿದೆ. ಸಂಗಾಗೆ ಸ್ವಾಗತ..ಎಂದು ರಾಜಸ್ಥಾನ ಫ್ರಾಂಚೈಸಿ ಟ್ವೀಟಿಸಿದೆ.
ಐಪಿಎಲ್-2021ಕ್ಕೆ ರಾಜಸ್ಥಾನ ತಂಡ ತನ್ನಲ್ಲೇ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಹಂಚಿಕೊಂಡಿರುವ ಟೀಮ್ ಮಾಲಕ ಮನೋಜ್ ಬದಾಲೆ, ಸಂಗಕ್ಕರ ನೂತನ ಟೀಮ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದರು.
ತನ್ನ ಆಯ್ಕೆಗೆ ಸಂತೋಷ ವ್ಯಕ್ತಪಡಿಸಿರುವ ಸಂಗಕ್ಕರ, ರಾಜಸ್ಥಾನ ಫ್ರಾಂಚೈಸಿಯೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿರುವೆ ಎಂದರು.
ಮೇರಿಲ್ಬೋರ್ನ್ ಕ್ರಿಕೆಟ್ ಕ್ಲಬ್ (ಎಂಸಿಸಿ)ಅಧ್ಯಕ್ಷರಾಗಿರುವ ಸಂಗಕ್ಕರ ಅಂತರ್ ರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾದ ಬಳಿಕ ಹಲವು ಟ್ವೆಂಟಿ-20 ಲೀಗ್ ಗಳಲ್ಲಿ ಸಲಹೆಗಾರರಾಗಿದ್ದರು.