2 ನೇ ಟೆಸ್ಟ್: ದ್ವಿಶತಕ ವಂಚಿತ ರೂಟ್
ಗಾಲೆ(ಶ್ರೀಲಂಕಾ), ಜ.24: ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನವಾಗಿರುವ ರವಿವಾರ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಸತತ ಎರಡನೇ ಟೆಸ್ಟ್ ಶತಕವನ್ನು ದಾಖಲಿಸಿದರು. ಆದರೆ ಹ್ಯಾಟ್ರಿಕ್ ದ್ವಿಶತಕ ದಾಖಲಿಸುವ ಅವಕಾಶದಿಂದ ವಂಚಿತಗೊಂಡರು.
ಮೊದಲ ಟೆಸ್ಟ್ನಲ್ಲಿ ದ್ವಿಶತಕ (228 ) ದಾಖಲಿಸಿ ತಂಡದ ಗೆಲುವಿ ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರೂಟ್ ತಮ್ಮ 19ನೇ ಟೆಸ್ಟ್ ಶತಕವನ್ನು ದಾಖಲಿಸಿದರು.
ಟೆಸ್ಟ್ನ ಮೂರನೇ ದಿನದ ಅಂತಿಮ ಓವರ್ನಲ್ಲಿ ರೂಟ್ ರನೌಟಾಗುವುದರೊಂದಿಗೆ ದ್ವಿಶತಕ ದಾಖಲಿಸುವ ಅವಕಾಶದಿಂದ ವಂಚಿತಗೊಂಡರು. ಇದಕ್ಕೂ ಮೊದಲು ಅವರು 139 ಎಸೆತಗಳಲ್ಲಿ 14 ಬೌಂಡರಿಗಳ ಸಹಾಯದಿಂದ ಶತಕ ತಲುಪಿದ್ದರು.
99ನೇ ಟೆಸ್ಟ್ ಆಡುತ್ತಿರುವ ರೂಟ್ ಗಳಿಸಿದ 186 ರನ್(309ಎ, 18ಬೌ) ನೆರವಿನಲ್ಲಿ ಇಂಗ್ಲೆಂಡ್ 114.2 ಓವರ್ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 339 ರನ್ ಗಳಿಸಿದೆ. ಶ್ರೀಲಂಕಾ ಮೊದಲ ಇನಿಂಗ್ಸ್ನಲ್ಲಿ ಗಳಿಸಿದ 381ರನ್ಗಳ ಮೊತ್ತವನ್ನು ಸರಿಗಟ್ಟಲು ಇನ್ನೂ 42 ರನ್ ಗಳಿಸಬೇಕಾಗಿದೆ. ನಾಗ್ಪುರದಲ್ಲಿ ಭಾರತ ವಿರುದ್ಧ 2012 ರಲ್ಲಿ ಪಾದಾರ್ಪಣೆ ಮಾಡಿದ್ದ ರೂಟ್ ಇದೀಗ ಇಂಗ್ಲೆಂಡ್ ಪರ ಗರಿಷ್ಠ ರನ್ ದಾಖಲಿಸಿರುವ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ. 8,238 ರನ್ ದಾಖಲಿಸಿರುವ ರೂಟ್ ಜೆಫ್ರಿ ಬಾಯ್ಕಿಟ್(8,114) , ಕೆವಿನ್ ಪೀಟರ್ಸನ್(8,181) ಮತ್ತು ಡೇವಿಡ್ ಗೊವೆರ್(8,231) ದಾಖಲೆಯನ್ನು ಹಿಂದಿಕ್ಕಿದ್ದಾರೆ.