ಎರಡು ಟೆಸ್ಟ್ ಗಳಿಗೆ ಬೈರ್ಸ್ಟೋವ್ಗೆ ವಿಶ್ರಾಂತಿ ಸರಿಯಲ್ಲ: ವಾನ್
ಹೊಸದಿಲ್ಲಿ:ಭಾರತ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಜಾನಿ ಬೈರ್ಸ್ಟೋವ್ಗೆ ವಿಶ್ರಾಂತಿ ನೀಡಿದ್ದಕ್ಕಾಗಿ ಇಂಗ್ಲೆಂಡ್ನ ಮಾಜಿ ನಾಯಕ ಮೈಕೆಲ್ ವಾನ್ ಮತ್ತೊಮ್ಮೆ ಇಂಗ್ಲೆಂಡ್ ತಂಡದ ಆಯ್ಕೆ ಸಮಿತಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚೆನ್ನೈನಲ್ಲಿ ನಡೆಯಲಿರುವ ಭಾರತ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ಬೈರ್ಸ್ಟೋವ್ ಅವರನ್ನು ಹೊರಗಿಡುವ ನಿರ್ಧಾರವನ್ನು ವಾನ್ ಬಹಿರಂಗವಾಗಿ ಟೀಕಿಸುತ್ತಿರುವುದು ಇದು ಎರಡನೇ ಬಾರಿಯಾಗಿದೆ.
ಲಂಕಾದ ವಿರುದ್ಧ ಎರಡನೇ ಟೆಸ್ಟ್ನಲ್ಲಿ ಬೈರ್ಸ್ಟೋವ್ ಮೊದಲ ಮತ್ತು ಎರಡನೇ ಇನಿಂಗ್ಸ್ಗಳಲ್ಲಿ ಕ್ರಮವಾಗಿ 28 ಮತ್ತು 29 ರನ್ಗಳನ್ನು ಸೇರಿಸಿದ್ದರು. ಆದರೆ ಬೈರ್ಸ್ಟೋವ್ ಸ್ಪಿನ್ನರ್ ಆಗಿರುವುದರಿಂದ ಇತರರಿಂದ ಪ್ರತ್ಯೇಕಿಸುತ್ತದೆ. ಸ್ಪಿನ್ನರ್ಗಳ ಪ್ರಾಬಲ್ಯ ಹೊಂದಿರುವ ಭಾರತದ ಪಿಚ್ಗಳಲ್ಲಿ ಆಡಲಿರುವ ಮೊದಲ ಎರಡು ಟೆಸ್ಟ್ಗಳಿಗೆ ಬೈರ್ಸ್ಟೋವ್ಗೆ ವಿಶ್ರಾಂತಿ ನೀಡುವುದು ದೊಡ್ಡ ನಷ್ಟ ಎಂದು ವಾನ್ ಅಭಿಪ್ರಾಯಪಟ್ಟಿದ್ದಾರೆ.
ಇಂಗ್ಲೆಂಡ್ನ ರಾಷ್ಟ್ರೀಯ ಆಯ್ಕೆ ಸಮಿತಿಯು ಭಾರತದ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಬೈರ್ಸ್ಟೋವ್, ಸ್ಯಾಮ್ ಕುರ್ರನ್ ಮತ್ತು ಮಾರ್ಕ್ ವುಡ್ಗೆ ವಿಶ್ರಾಂತಿ ನೀಡಿದೆ. ಜೋ ರೂಟ್ ಅವರ ನಾಯಕತ್ವದಲ್ಲಿ, ಜೂನ್ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ಗೆ ಪ್ರವೇಶಿಸುವ ಸಾಧ್ಯತೆಯನ್ನು ಹೆಚ್ಚಿಸಲು ಇಂಗ್ಲೆಂಡ್ ಉತ್ಸಾಹಭರಿತ ಪ್ರದರ್ಶನವನ್ನು ತೋರಿಸಲು ಪ್ರಯತ್ನಿಸುತ್ತಿದೆ.
ಭಾರತ ಮತ್ತು ಇಂಗ್ಲೆಂಡ್ ನಾಲ್ಕು ಟೆಸ್ಟ್, ಐದು ಟ್ವೆಂಟಿ-20 ಮತ್ತು ಮೂರು ಏಕದಿನ ಪಂದ್ಯಗಳಲ್ಲಿ ಆಡಲು ಸಜ್ಜಾಗಿದೆ. ಮೊದಲ ಟೆಸ್ಟ್ ಫೆಬ್ರವರಿ 5 ರಂದು ಚೆನ್ನೈನಲ್ಲಿ ಪ್ರಾರಂಭವಾಗಲಿದೆ.