14ನೇ ಆವೃತ್ತಿಯ ಐಪಿಎಲ್: ಫೆ.18ರಂದು ಆಟಗಾರರ ಹರಾಜು ಪ್ರಕ್ರಿಯೆ
photo:twitter
ಹೊಸದಿಲ್ಲಿ: ಮುಂಬರುವ 14ನೇ ಆವೃತ್ತಿಯ ಐಪಿಎಲ್ ಗೆ ಫೆಬ್ರವರಿ 18ರಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಐಪಿಎಲ್ ಬುಧವಾರ ಟ್ವೀಟಿಸಿದೆ.
ಕಳೆದ ಆವೃತ್ತಿಯ ಐಪಿಎಲ್ ಟೂರ್ನಮೆಂಟ್ ಕೊರೋನ ಕಾರಣದಿಂದ ಯುಎಇಯಲ್ಲಿ ಸೆ.19ರಿಂದ ನ.8ರ ತನಕ ನಡೆದಿತ್ತು. ಈ ವರ್ಷದ ಐಪಿಎಲ್ ಟೂರ್ನಮೆಂಟ್ ಭಾರತದಲ್ಲಿ ನಡೆಯುವ ನಿರೀಕ್ಷೆ ಇದೆ.
ಕೆಲವು ಮಾಧ್ಯಮ ವರದಿಯ ಪ್ರಕಾರ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಎಪ್ರಿಲ್-ಮೇನಲ್ಲಿ ನಡೆಯಲಿದೆ. ಆದರೆ, ಐಪಿಎಲ್ 2021ರ ಟೂರ್ನಿ ನಡೆಯಲಿರುವ ಸ್ಥಳ ಹಾಗೂ ದಿನಾಂಕವನ್ನು ಬಿಸಿಸಿಐ ಇನ್ನಷ್ಟೇ ಪ್ರಕಟಿಸಬೇಕಾಗಿದೆ.
ವಾರಗಳ ಹಿಂದೆ ಎಲ್ಲ ಫ್ರಾಂಚೈಸಿಗಳು ತಮ್ಮಲ್ಲೇ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಪ್ರಕಟಿಸಿದ್ದವು.
2021ರ ಐಪಿಎಲ್ ಆಟಗಾರರ ಹರಾಜಿಗೆ ಮೊದಲು 139 ಆಟಗಾರರನ್ನು ಉಳಿಸಿಕೊಳ್ಳಲಾಗಿತ್ತು, 57 ಆಟಗಾರರನ್ನು ಬಿಡುಗಡೆಗೊಳಿಸಲಾಗಿತ್ತು.
Next Story