ಜೊಕೊವಿಕ್ಗೆ ಚಾರ್ಡಿ ಮೊದಲ ಎದುರಾಳಿ
ಆಸ್ಟ್ರೇಲಿಯನ್ ಓಪನ್
ಮೆಲ್ಬೋರ್ನ್ : ಈವರ್ಷದ ಮೊದಲ ಗ್ರಾನ್ಸ್ಲಾಮ್ ಟೂರ್ನಿ ಆಸ್ಟ್ರೇಲಿಯನ ಓಪನ್ಗೆ ಶುಕ್ರವಾರ ಡ್ರಾ ಪ್ರಕ್ರಿಯೆ ನಡೆದಿದ್ದು, ಫ್ರಾನ್ಸ್ನ ಜೆರೆಮಿ ಚಾರ್ಡಿ ಅವರನ್ನು ಎದುರಿಸುವ ಮೂಲಕ ನೊವಾಕ್ ಜೊಕೊವಿಕ್ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟ ನಡೆಸಲಿದ್ದಾರೆ.
ಕಳೆದ ವರ್ಷ ಡೊಮಿನಿಕ್ ಥೀಮ್ರನ್ನು ಸೋಲಿಸುವುದರೊಂದಿಗೆ ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಮೆಲ್ಬೋರ್ನ್ ಪಾರ್ಕ್ನಲ್ಲಿ ದಾಖಲೆ ಎಂಟನೇ ಬಾರಿ ಪ್ರಶಸ್ತಿಯನ್ನು ಜಯಿಸಿದ್ದರು. ಈ ಬಾರಿ 3ನೇ ಶ್ರೇಯಾಂಕ ಪಡೆದಿರುವ ಥೀಮ್ ಮೊದಲ ಸುತ್ತಿನಲ್ಲಿ ಕಝಕ್ ಆಟಗಾರ ಮಿಖೈಲ್ ಕುಕುಶ್ಕಿನ್ರನ್ನು ಎದುರಿಸಲಿದ್ದಾರೆ.
2009ರ ಬಳಿಕ ಪ್ರಮುಖ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ರಫೆಲ್ ನಡಾಲ್ ಮೊದಲ ಸುತ್ತಿನಲ್ಲಿ ಸರ್ಬಿಯದ ಲಾಸ್ಲೊ ಜೆರೆ ಅವರನ್ನು ಎದುರಿಸಲಿದ್ದಾರೆ. 20 ಗ್ರಾನ್ಸ್ಲಾಮ್ ಒಡೆಯ ರೋಜರ್ ಫೆಡರರ್ ಮಂಡಿ ಶಸ್ತ್ರಚಿಕಿತ್ಸೆಯ ಕಾರಣಕ್ಕೆ ಈ ವರ್ಷ ಅವರು ಆಡುತ್ತಿಲ್ಲ. 24ನೇ ಗ್ರಾನ್ಸ್ಲಾಮ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಅಮೆರಿಕದ ಸೆರೆನಾ ವಿಲಿಯಮ್ಸ್ ಮಹಿಳೆಯರ ಸಿಂಗಲ್ಸ್ನಲ್ಲಿ ಲೌರಾ ಸಿಗ್ಮಂಡ್ರನ್ನು ಎದುರಿಸುವುದರೊಂದಿಗೆ ತಮ್ಮ ಅಭಿಯಾನ ಆರಂಭಿಸಲಿದ್ದಾರೆ.
2019ರ ಚಾಂಪಿಯನ್ ಜಪಾನ್ನ ನವೊಮಿ ಒಸಾಕಾ ಅವರು ಅನಸ್ತೇಸಿಯ ಪಾವ್ಲಚೆಂಕೊವಾರನ್ನು ಎದುರಿಸಲಿದ್ದಾರೆ.