ತವರಿನ ಮೊದಲ ಟೆಸ್ಟ್ನಲ್ಲಿ ಆಂಗ್ಲರಿಗೆ ಶರಣಾದ ಕೊಹ್ಲಿ ಪಡೆ
ಭಾರತಕ್ಕೆ 227 ರನ್ ಸೋಲು: ಇಂಗ್ಲೆಂಡ್ಗೆ ಸರಣಿ ಮುನ್ನಡೆ
ಚೆನ್ನೈ: ಇಂಗ್ಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ ನಲ್ಲಿ ಅತಿಥೇಯ ಭಾರತ ತಂಡವು 227 ರನ್ ಗಳ ಅಂತರದಲ್ಲಿ ಸೋತಿದ್ದು, ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿದೆ.
ನಾಲ್ಕನೇ ಇನ್ನಿಂಗ್ಸ್ ನಲ್ಲಿ ಭಾರತಕ್ಕೆ ಇಂಗ್ಲೆಂಡ್ ತಂಡವು 420 ರನ್ ಗಳ ಗುರಿ ನೀಡಿತ್ತು. ಆದರೆ ಕೊಹ್ಲಿ ಪಡೆಯು ಕೇವಲ 192 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಎರಡನೇ ಇನ್ನಿಂಗ್ಸ್ನಲ್ಲಿ ಭಾರತದ ಪರ ನಾಯಕ ಕೊಹ್ಲಿ 72, ಶುಭಮನ್ ಗಿಲ್ 50 ರನ್ ಬಾರಿಸಿದರು. ಇಂಗ್ಲೆಂಡ್ ಪರ ಜಾಕ್ ಲೀಚ್ 4 ಹಾಗೂ ಆಂಡರ್ಸನ್ 3 ವಿಕೆಟ್ ಕಬಳಿಸಿದರು. ಮೊದಲ್ ಇನ್ನಿಂಗ್ಸ್ನಲ್ಲಿ ದ್ವಿಶತಕ ಸಿಡಿಸಿದ್ದ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಮೊದಲ ಇನ್ನಿಂಗ್ಸ್:
ಇಂಗ್ಲೆಂಡ್: 578/10
ಭಾರತ: 337/10
ದ್ವಿತೀಯ ಇನ್ನಿಂಗ್ಸ್:
ಇಂಗ್ಲೆಂಡ್ 178/ 10
ಭಾರತ 192/ 10
Next Story