ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ರನ್ನು ಮಣಿಸಿ ಆಸ್ಟ್ರೇಲಿಯಾ ಓಪನ್ ಗೆದ್ದುಕೊಂಡ ಜೊಕೊವಿಕ್
ಮೆಲ್ಬೋರ್ನ್: ಟೆನಿಸ್ ಕ್ರೀಡೆಯಲ್ಲಿ ಅಗ್ರಸ್ಥಾನವನ್ನು ಹೊಂದಿರುವ ಸರ್ಬಿಯಾದ ನೊವಾಕ್ ಜೊಕೊವಿಕ್ ತಮ್ಮ ಗೆಲುವಿನ ಯಾತ್ರೆಯನ್ನು ಮುಂದುವರಿಸಿದ್ದಾರೆ. ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ನಡೆದ ಆಸ್ಟ್ರೇಲಿಯಾ ಓಪನ್ ಫೈನಲ್ ಪಂದ್ಯಾಟದಲ್ಲಿ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ರನ್ನು ಮಣಿಸಿ 9ನೆ ಆಸ್ಟ್ರೇಲಿಯಾ ಓಪನ್ ಸರಣಿಯನ್ನು ತಮ್ಮದಾಗಿಸಿಕೊಂಡರು.
7-5, 6-2 ಮತ್ತು 6-2 ಸೆಟ್ ಗಳಲ್ಲಿ ಜೊಕೊವಿಕ್ ಡ್ಯಾನಿಲ್ ರನ್ನು ಮಣಿಸಿದರು. 20 ಪಂದ್ಯಗಳನ್ನು ನಿರಂತರವಾಗಿ ಗೆದ್ದುಕೊಂಡು ಬಂದಿದ್ದ ರಷ್ಯಾದ ಆಟಗಾರ ಡ್ಯಾನಿಲ್ ರಿಗೆ ಕೊನೆಗೂ ಜೊಕೊವಿಕ್ ಸೋಲಿನ ರುಚಿ ತೋರಿಸಿದರು. ಇದುವರೆಗೆ ರಫೆಲ್ ನಡಾಲ್ ಹಾಗೂ ರೋಜರ್ ಫೆಡರರ್ 20 ಗ್ರ್ಯಾಂಡ್ ಸ್ಲಾಮ್ ಗೆದ್ದಿದ್ದು, ಈ ವಿಜಯದ ಮೂಲಕ ಜೊಕೊವಿಕ್ ತಮ್ಮ 18ನೇ ಗ್ರಾಂಡ್ ಸ್ಲಾಮ್ ಪ್ರಸಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
Next Story