ಆರ್ಚರ್ ದೀಪಿಕಾ ಒಲಿಂಪಿಕ್ಸ್ ಪದಕ ಗೆಲುವಿಗೆ ತಯಾರಿ | Vartha Bharati- ವಾರ್ತಾ ಭಾರತಿ

--

ಆರ್ಚರ್ ದೀಪಿಕಾ ಒಲಿಂಪಿಕ್ಸ್ ಪದಕ ಗೆಲುವಿಗೆ ತಯಾರಿ

  ಕೋಲ್ಕತಾ: ಮೂರನೇ ಒಲಿಂಪಿಕ್ಸ್ ಗೆ ಸಜ್ಜಾಗಿರುವ ಭಾರತದ ನಂಬರ್ ಒನ್ ಮಹಿಳಾ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಅವರು ಪದಕ ಗೆಲುವಿಗೆ ತೀವ್ರ ಅಭ್ಯಾಸ ನಡೆಸುತ್ತಿದ್ದಾರೆ.

15ನೇ ವಯಸ್ಸಿನಲ್ಲಿ 2010ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ದೀಪಿಕಾ ಅವರು ಆರ್ಚರಿ ವಿಶ್ವಕಪ್ ಫೈನಲ್‌ನಲ್ಲಿ ಐದು ಬಾರಿ ಚಿನ್ನ ಜಯಿಸಿದ್ದಾರೆ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹಲವು ಪದಕಗಳನ್ನು ಸಂಗ್ರಹಿಸಿದ್ದಾರೆ. ಆದರೆ ಒಲಿಂಪಿಕ್ಸ್‌ನಲ್ಲಿ ಈ ವರೆಗೂ ಅವರಿಗೆ ಪದಕ ಗೆಲ್ಲಲು ಸಾಧ್ಯವಾಗಿಲ್ಲ.

 ‘‘ಮುಂಬರುವ ಒಲಿಂಪಿಕ್ಸ್ ನನಗೆ ವಿಭಿನ್ನವಾಗಿರುತ್ತದೆ. ನನ್ನ ಆಲೋಚನೆಗಳನ್ನು ಹೇಗೆ ನಿಯಂತ್ರಿಸಬೇಕೆಂದು ನಾನು ಕಲಿಯುತ್ತಿದ್ದೇನೆ. ಅದೇ ಸಮಯದಲ್ಲಿ, ನಾನು ಉತ್ತಮ ಪ್ರದರ್ಶನ ನೀಡುತ್ತಿದ್ದೇನೆ ’’ಎಂದು ದೀಪಿಕಾ ತಿಳಿಸಿದ್ದಾರೆ. 2012ರಲ್ಲಿ ಲಂಡನ್ ಒಲಿಂಪಿಕ್ಸ್ ನಲ್ಲಿ ತನ್ನ ಮೊದಲ ಪ್ರದರ್ಶನದಲ್ಲಿ ನಿರ್ಗಮಿಸಿದ್ದರು. ದೀಪಿಕಾ ವೈಯಕ್ತಿಕ ಮತ್ತು ತಂಡದ ಎರಡೂ ಸ್ಪರ್ಧೆಗಳ ಮೊದಲ ಸುತ್ತಿನಲ್ಲಿ ನಿರ್ಗಮಿಸಿದರು.

 ನಾಲ್ಕು ವರ್ಷಗಳ ನಂತರ ರಿಯೊದಲ್ಲಿ ದೀಪಿಕಾ ವೈಯಕ್ತಿಕ ವಿಭಾಗದಲ್ಲಿ ಕೊನೆಯ -16 ನೇ ಸುತ್ತಿನಲ್ಲಿ ಮತ್ತು ತಂಡದಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ರಶ್ಯ ವಿರುದ್ಧ ಸೋತು ನಿರ್ಗಮಿಸಿದ್ದರು.

ಪ್ಯಾರಿಸ್‌ನಲ್ಲಿ ನಡೆಯಲಿರುವ ವಿಶ್ವಕಪ್ 3 ನೇ ಹಂತದಲ್ಲಿ ಬಿಲ್ಲುಗಾರರು ತಂಡದ ಕೋಟಾವನ್ನು ಪಡೆದುಕೊಳ್ಳಲು ವಿಫಲವಾದರೆ ಈ ಬಾರಿ ದೀಪಿಕಾ ಟೋಕಿಯೊ ಕ್ರೀಡಾಕೂಟದಲ್ಲಿ ಭಾರತದ ಪರ ಪದಕದ ಬೇಟೆ ನಡೆಸಲಿರುವ ಏಕೈಕ ಬಿಲ್ಲುಗಾರ್ತಿ ಎನಿಸಿಕೊಳ್ಳಲಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಮಹಿಳಾ ಸ್ಪರ್ಧೆಗಳಲ್ಲಿ ಸಾಂಪ್ರದಾಯಿಕವಾಗಿ ಪ್ರಾಬಲ್ಯ ಹೊಂದಿರುವ ಕೊರಿಯಾ 2021 ರಲ್ಲಿ ನಡೆಯುವ ಬಿಲ್ಲುಗಾರಿಕೆ ವಿಶ್ವಕಪ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ದೃ ಢಪಡಿಸಿದೆ.

‘‘ಕೊರಿಯಾದ ಸ್ಪರ್ಧಿಗಳು ಭಾಗವಹಿಸಿದರೆ ಸ್ವಲ್ಪ ಹೆಚ್ಚು ಸ್ಪರ್ಧೆ ಇರುತ್ತದೆ. ಆದರೆ ಇದು ನನಗೆ ಅಪ್ರಸ್ತುತವಾಗಿದೆ. ಅವರು ಆಡಲು ಬಯಸಿದರೆ ಅಥವಾ ಆಡಲು ಬಯಸದಿದ್ದರೆ ಇದು ಅವರ ನಿರ್ಧಾರ. ನಾನು ಆಡಲು ಬಯಸುತ್ತೇನೆ ’’ಎಂದು ದೀಪಿಕಾ ಹೇಳಿದರು.

15ನೇ ವಯಸ್ಸಿನಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಸಾಧನೆಯನ್ನು ನೆನಪಿಸಿಕೊಳ್ಳುತ್ತಾ ಅವರು ಹೀಗೆ ಹೇಳಿದರು ‘‘ ಆ ಸಮಯದಲ್ಲಿ ನನಗೆ ಏನೂ ತಿಳಿದಿರಲಿಲ್ಲ. ನಾನು ತುಂಬಾ ಚಿಕ್ಕವಳಾಗಿದ್ದೆ. ಆಗ ನನಗೆ ಸೋಲು, ಗೆಲುವು ಮುಖ್ಯವಾಗಿರಲಿಲ್ಲ’’ ಎಂದು ಅಭಿಪ್ರಾಯಪಟ್ಟರು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top