ಚೆನ್ನೈ ತಂಡದ ಇಬ್ಬರು ಸಿಬ್ಬಂದಿ, ಬಸ್ ಚಾಲಕನಿಗೆ ಕೊರೋನ ಪಾಸಿಟಿವ್
ಭ್ಯಾಸವನ್ನು ರದ್ದುಪಡಿಸಿದ ತಂಡ
ಹೊಸದಿಲ್ಲಿ: ಚೆನ್ನೈ ಸೂಪರ್ ಕಿಂಗ್ಸ್ ನ (ಸಿಎಸ್ ಕೆ)ಇಬ್ಬರು ಸಿಬ್ಬಂದಿಗಳು ಹಾಗೂ ಬಸ್ ಚಾಲಕನಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಅವರನ್ನು ಉಳಿದ ತಂಡದಿಂದ ಪ್ರತ್ಯೇಕವಾಗಿಡಲಾಗಿದೆ.
ಚೆನ್ನೈ ತಂಡವು ಬುಧವಾರ ದಿಲ್ಲಿಯಲ್ಲಿ ನಡೆಯಲಿರುವ ರಾಜಸ್ಥಾನ ರಾಯಲ್ಸ್ ವಿರುದ್ಧ ಪಂದ್ಯಕ್ಕಿಂತ ಮೊದಲು ನಡೆಸಬೇಕಾಗಿದ್ದ ಅಭ್ಯಾಸವನ್ನು ರದ್ದುಪಡಿಸಿದೆ ಎಂದು ವರದಿಯಾಗಿದೆ.
ದಿಲ್ಲಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ನ (ಡಿಡಿಸಿಎ) ಐವರು ಮೈದಾನ ಸಿಬ್ಬಂದಿಗೆ ಕೊರೋನ ಪಾಸಿಟಿವ್ ಆಗಿದ್ದು, ಸಿಬ್ಬಂದಿಗಳನ್ನು ಪ್ರತ್ಯೇಕವಾಗಿಡಲಾಗಿದೆ. ಡಿಡಿಸಿಎಯ ಅರುಣ್ ಜೇಟ್ಲಿ ಸ್ಟೇಡಿಯಂ ಮೇ 8ರ ತನಕ ಐಪಿಎಲ್ ಪಂದ್ಯಗಳ ಆತಿಥ್ಯವನ್ನು ವಹಿಸಿಕೊಂಡಿದೆ.
Next Story