ಕಮಿನ್ಸ್ ಯು-ಟರ್ನ್: ಪಿಎಂ ಕೇರ್ಸ್ ಬದಲಿಗೆ ಆಸ್ಟ್ರೇಲಿಯಾದ 'ಇಂಡಿಯಾ ಕೋವಿಡ್ -19 ಕ್ರೈಸಿಸ್ ಅಪೀಲ್'ಗೆ ದೇಣಿಗೆ
ಹೊಸದಿಲ್ಲಿ: ಕೆಲವೇ ದಿನಗಳ ಹಿಂದೆ ಆಸ್ಟ್ರೇಲಿಯದ ಸ್ಟಾರ್ ಆಟಗಾರ ಪ್ಯಾಟ್ ಕಮಿನ್ಸ್ ತನ್ನ ಉದಾತ್ತ ಕಾರ್ಯಕ್ಕಾಗಿ ಎಲ್ಲರಿಂದ ಪ್ರಶಂಸೆ ಪಡೆದಿದ್ದರು. ಐಪಿಎಲ್ 2021 ರಲ್ಲಿ ಕೆಕೆಆರ್ ಪರವಾಗಿ ಆಡುತ್ತಿರುವ ಕಮಿನ್ಸ್ ಕೋವಿಡ್-19 ಎರಡನೇ ಅಲೆಯಿಂದಾಗಿ ಉಂಟಾಗಿರುವ ಭಾರತದ ಭಯಾನಕ ಸ್ಥಿತಿಯನ್ನು ನೋಡಿ ಪಿಎಂ ಕೇರ್ಸ್ ಫಂಡ್ ಗೆ 50,000 ಡಾಲರ್ ದೇಣಿಗೆ ನೀಡಿದ್ದರು.
ಇದೀಗ ಅವರು ಯೂ ಟರ್ನ್ ಪಡೆದಿದ್ದು, ಪಿಎಂ ಕೇರ್ಸ್ ಫಂಡ್ ಬದಲಿಗೆ ತಮ್ಮ ಹಣವನ್ನು ಯುನಿಸೆಫ್ ಆಸ್ಟ್ರೇಲಿಯಾದ ಇಂಡಿಯಾ ಕೋವಿಡ್ -19 ಕ್ರೈಸಿಸ್ ಅಪೀಲ್ಗೆ ನೀಡಿದ್ದಾರೆ. ಭಾರತದ ಸ್ಥಿತಿಯನ್ನು ನೋಡಿ, ವಿವಿಧ ಸಂಸ್ಥೆಗಳು ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಹಾಗೂ ಹಣವನ್ನು ದಾನ ಮಾಡುತ್ತಿವೆ. ಅದೇ ರೀತಿಯಲ್ಲಿ, ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ಭಾರತಕ್ಕೆ ಸಹಾಯ ಮಾಡುವ ಪ್ರಯತ್ನವನ್ನು ಕೈಗೊಂಡಿದೆ.
ಪ್ಯಾಟ್ ಕಮಿನ್ಸ್ ಪಿಎಂ ಕೇರ್ಸ್ ಫಂಡ್ಗೆ ದೇಣಿಗೆ ನೀಡಿದ್ದಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ಟೀಕಿಸಿದರು. ಪಿಎಂ ಕೇರ್ಸ್ನಲ್ಲಿನ ಹಣವನ್ನು ಸರಿಯಾಗಿ ಬಳಕೆ ಮಾಡಲಾಗುತ್ತಿಲ್ಲ. ಅಗತ್ಯವಿರುವವರಿಗೆ ನೀಡಲಾಗುತ್ತಿಲ್ಲ ಎಂದು ಹಲವರು ಹೇಳಿದ್ದರು. ಕಮಿನ್ಸ್ ತನ್ನ ದೇಣಿಗೆ ಅನ್ನು ಯುನಿಸೆಫ್ ಆಸ್ಟ್ರೇಲಿಯಾದ ಇಂಡಿಯಾ ಕೋವಿಡ್ -19 ಕ್ರೈಸಿಸ್ ಅಪೀಲ್ಗೆ ತಿರುಗಿಸಲು ಇದೊಂದು ಕಾರಣವಾಗಿರಬಹುದು.
Terrific work @CricketAus
— Pat Cummins (@patcummins30) May 3, 2021
FYI I ended up allocating my donation to UNICEF Australia's India COVID-19 Crisis Appeal.
If you're able to, please join many others in supporting this here https://t.co/SUvGjlGRm8 https://t.co/1c0NE9PFdO