ಐಪಿಎಲ್: ಹೈದರಾಬಾದ್, ದಿಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರಿಗೆ ಕೊರೋನ ಸೋಂಕು ದೃಢ
ಇಂದಿನ ಪಂದ್ಯವೂ ಮುಂದೂಡಿಕೆ ?
ಸಾಂದರ್ಭಿಕ ಚಿತ್ರ
ಮುಂಬೈ, ಮೇ 4: ಸನ್ ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ವೃದ್ಧಿಮಾನ್ ಸಹಾ ಹಾಗೂ ದಿಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಬೌಲರ್ ಅಮಿತ್ ಮಿಶ್ರಾ ಅವರಿಗೆ ಕೊರೋನ ಸೋಂಕು ದೃಢಪಟ್ಟಿದೆ ಎಂದು ವರದಿಯಾಗಿದೆ.
ಸಹಾಗೆ ಸೋಂಕು ದೃಢಪಟ್ಟ ಹಿನ್ನಲೆ ಮಂಗಳವಾರ ನಿಗದಿಯಾಗಿರುವ ಮುಂಬೈ ಇಂಡಿಯನ್ಸ್- ಸನ್ರೈಸರ್ಸ್ ಹೈದರಾಬಾದ್ ಪಂದ್ಯ ಮುಂದೂಡಿಕೆಯಗುವ ಸಾಧ್ಯತೆಗಳಿವೆ.
ಇದಕ್ಕೂ ಮೊದಲು ಕೆಕೆಆರ್ ತಂಡದ ವರುಣ್ ಚಕ್ರವರ್ತಿ ಹಾಗೂ ಸಂದೀಪ್ ವಾರಿಯರ್ ಮತ್ತು ಚೆನ್ನೈ ತಂಡದ ಬಸ್ ಚಾಲಕ, ಇಬ್ಬರು ಸಿಬ್ಬಂದಿಗೆ ಸೋಂಕು ದೃಢಪಟ್ಟಿತ್ತು.
Next Story