ವರ್ಷಾಂತ್ಯದಲ್ಲಿ ಐಪಿಎಲ್ನ ಎರಡನೇ ಹಂತ
ಹೊಸದಿಲ್ಲಿ: ಹದಿನಾಲ್ಕನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅನಿರ್ದಿಷ್ಟಾವಧಿಗೆ ಸ್ಥಗಿತಗೊಂಡಿರುವ ಉಳಿದ ಪಂದ್ಯಗಳನ್ನು ಬಿಸಿಸಿಐ ಈ ವರ್ಷದ ಕೊನೆಯಲ್ಲಿ ಆಯೋಜಿಸುವ ವಿಶ್ವಾಸದಲ್ಲಿದೆ.
ಈಗಾಗಲೇ 29 ಪಂದ್ಯಗಳು ನಡೆದಿವೆ. ಉಳಿದ ಪಂದ್ಯಗಳನ್ನು ಸದ್ಯಕ್ಕೆ ಅಮಾನತುಗೊಳಿಸಲಾಗಿದೆ. ಇವುಗಳನ್ನು ಮುಂದೆ ಇಂಗ್ಲೆಂಡ್, ಯುಎಇ ಮತ್ತು ಆಸ್ಟ್ರೇಲಿಯ ಈ ಪೈಕಿ ಒಂದು ದೇಶದಲ್ಲಿ ಆಯೋಜಿಸುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.
Next Story