ಆರ್ಚರಿ ವಿಶ್ವಕಪ್: ಭಾರತೀಯ ಮಹಿಳಾ ತಂಡಕ್ಕೆ ಚಿನ್ನದ ಪದಕ
ಹೊಸದಿಲ್ಲಿ: ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಆರ್ಚರಿ(ಬಿಲ್ಲುಗಾರಿಕೆ) ವಿಶ್ವಕಪ್ ಹಂತ -3 ರಲ್ಲಿ ದೀಪಿಕಾ ಕುಮಾರಿ, ಅಂಕಿತಾ ಭಕ್ತ್ ಹಾಗೂ ಕೋಮಲಿಕಾ ಬಾರಿ ಅವರನ್ನೊಳಗೊಂಡ ಭಾರತದ ಮಹಿಳಾ ರಿಕರ್ವ್ ತಂಡ ಚಿನ್ನ ಗೆದ್ದುಕೊಂಡಿದೆ.
ರವಿವಾರ ನಡೆದ ಫೈನಲ್ನಲ್ಲಿ ಭಾರತ ಮಹಿಳಾ ತಂಡವು ಮೆಕ್ಸಿಕೊವನ್ನು ಸೋಲಿಸಿದೆ.
ಈ ತಿಂಗಳ ಆರಂಭದಲ್ಲಿ ನಡೆದ ಅಂತಿಮ ಒಲಿಂಪಿಕ್ಸ್ ಅರ್ಹತಾ ಪಂದ್ಯದಲ್ಲಿ ಮೊದಲ ಸುತ್ತಿನ ಸೋಲಿನ ನಿರಾಶೆಯಿಂದ ಈ ಮೂವರು ಬೇಗನೆ ಹೊರ ಬಂದರು . ಮೆಕ್ಸಿಕೊ ವಿರುದ್ಧ 5-1 ಅಂತರದಿಂದ ವಿಜಯಶಾಲಿಯಾಗಿ ಭಾರತಕ್ಕೆ ಈ ವಿಶ್ವಕಪ್ ನಲ್ಲಿ ಎರಡನೇ ಚಿನ್ನದ ಪದಕವನ್ನು ಗೆದ್ದುಕೊಟ್ಟರು.
ಇದಕ್ಕೂ ಮುನ್ನ ಶನಿವಾರ ನಡೆದ ಕಾಂಪೌಂಡ್ ವೈಯಕ್ತಿಕ ಸ್ಪರ್ಧೆಯಲ್ಲಿ ಭಾರತವು ಅಭಿಷೇಕ್ ವರ್ಮಾ ಮೂಲಕ ಚಿನ್ನದ ಪದಕ ಗೆದ್ದಿದೆ.
Next Story