6ನೇ ಬಾರಿ ವಿಂಬಲ್ಡನ್ ಚಾಂಪಿಯನ್ ಆಗಿ ಹೊರಹೊಮ್ಮಿದ ನೊವಾಕ್ ಜೊಕೊವಿಕ್
ಲಂಡನ್, ಜು.11: ಇಟಲಿಯ ಮ್ಯಾಟಿಯೊ ಬೆರೆಟಿನಿ ವಿರುದ್ಧ 6-7(4), 6-4, 6-4, 6-3 ಸೆಟ್ ಗಳ ಅಂತರದಿಂದ ಗೆಲುವು ಸಾಧಿಸಿರುವ ನೊವಾಕ್ ಜೊಕೊವಿಕ್ ವಿಂಬಲ್ಡನ್ ಟೆನಿಸ್ ಚಾಂಪಿಯನ್ಶಿಪ್ನಲ್ಲಿ ಆರನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಸರ್ಬಿಯ ಆಟಗಾರ ಜೊಕೊವಿಕ್ ಈ ಹಿಂದೆ 2011, 2014, 2015, 2018, 2019ರಲ್ಲಿ ವಿಂಬಲ್ಡನ್ ಟ್ರೋಫಿ ಜಯಿಸಿದ್ದರು.
ರವಿವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್ ನಲ್ಲಿ ಜಯ ಸಾಧಿಸಿರುವ ಜೊಕೊವಿಕ್ ಒಟ್ಟು 20ನೇ ಗ್ರಾನ್ಸ್ಲಾಮ್ ಪ್ರಶಸ್ತಿಯನ್ನು ಗೆದ್ದುಕೊಂಡರು. ಈ ಮೂಲಕ ಸ್ವಿಸ್ ನ ರೋಜರ್ ಫೆಡರರ್ ಹಾಗೂ ಸ್ಪೇನ್ನ ರಫೆಲ್ ನಡಾಲ್ ಅವರ ಗರಿಷ್ಠ ಪ್ರಶಸ್ತಿ ದಾಖಲೆ(20 ಪ್ರಶಸ್ತಿ)ಯನ್ನು ಸರಿಗಟ್ಟಿದರು.
Next Story