ಟೋಕಿಯೊ:ಕನ್ನಡಿಗ ಈಜುಪಟು ಶ್ರೀಹರಿ ನಟರಾಜ್ ಸೆಮಿಫೈನಲ್ ತಲುಪಲು ವಿಫಲ
photo: The New Indian express
ಟೋಕಿಯೊ, ಜು.25: ಕರ್ನಾಟಕದ ಈಜುಪಟು ಶ್ರೀಹರಿ ನಟರಾಜ್ ಟೋಕಿಯೊ ಒಲಿಂಪಿಕ್ ಈಜು ಸ್ಪರ್ಧೆಯಲ್ಲಿ ಸೆಮಿಫೈನಲ್ಗೆ ಅರ್ಹತೆ ಗಿಟ್ಟಿಸಿಕೊಳ್ಳಲು ವಿಫಲರಾಗಿದ್ದಾರೆ.
ರವಿವಾರ ನಡೆದ ಪುರುಷರ 100 ಮೀಟರ್ ಬ್ಯಾಕ್ಸ್ಟ್ರೋಕ್ ವಿಭಾಗದಲ್ಲಿ ಒಟ್ಟಾರೆಯಾಗಿ 27ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಇದರೊಂದಿಗೆ ಅವರ ಪದಕದ ಕನಸು ಭಗ್ನವಾಯಿತು.
100 ಮೀಟರ್ ಬ್ಯಾಕ್ಸ್ಟ್ರೋಕ್ ಹೀಟ್ ಅನ್ನು 54.32 ಸೆಕೆಂಡ್ಗಳಲ್ಲಿ ಗುರಿ ಮುಟ್ಟಿದ ಶ್ರೀಹರಿ 6ನೇ ಸ್ಥಾನ ಪಡೆದರು. ಆದರೆ ಒಟ್ಟಾರೆಯಾಗಿ 40 ಈಜುಪಟುಗಳ ಪೈಕಿ 27ನೇ ಸ್ಥಾನ ಪಡೆದರು. ಅಗ್ರ 16 ಈಜುಪಟುಗಳು ಸೆಮಿ ಫೈನಲ್ಗೆ ಅರ್ಹತೆ ಪಡೆದಿದ್ದಾರೆ. 20ರ ವಯಸ್ಸಿನ ಬೆಂಗಳೂರಿನ ಶ್ರೀಹರಿ ಇದೇ ಮೊದಲ ಬಾರಿ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿದ್ದಾರೆ
Next Story