ನಾಲ್ಕನೇ ಟೆಸ್ಟ್: ಭಾರತ 191 ರನ್ ಗೆ ಆಲೌಟ್
ವಿರಾಟ್ ಕೊಹ್ಲಿ, ಶಾರ್ದೂಲ್ ಠಾಕೂರ್ ಅರ್ಧಶತಕ, ವೋಕ್ಸ್ ಗೆ 4 ವಿಕೆಟ್
ದಿ ಓವಲ್: ಇಂಗ್ಲೆಂಡ್ ವೇಗದ ಬೌಲರ್ ಗಳಾದ ಕ್ರಿಸ್ ವೋಕ್ಸ್(4-55) ಹಾಗೂ ಒಲ್ಲಿ ರಾಬಿನ್ಸನ್(3-38) ನಿಖರ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ ಕ್ರಿಕೆಟ್ ತಂಡ ಗುರುವಾರ ಇಲ್ಲಿ ಆರಂಭವಾದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 191 ರನ್ ಗಳಿಸುವಷ್ಟರಲ್ಲಿ ಸರ್ವಪತನವಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿಸಲ್ಪಟ್ಟ ಭಾರತದ ಪರ ಇನಿಂಗ್ಸ್ ಆರಂಭಿಸಿದ ಕೆ.ಎಲ್. ರಾಹುಲ್(17) ಹಾಗೂ ರೋಹಿತ್ ಶರ್ಮಾ(11) ಉತ್ತಮ ಬುನಾದಿ ಹಾಕಿಕೊಡಲು ವಿಫಲರಾದರು. ಚೇತೇಶ್ವರ ಪೂಜಾರ(4), ಅಜಿಂಕ್ಯ ರಹಾನೆ(14), ರಿಷಭ್ ಪಂತ್(9) ಹಾಗೂ ರವೀಂದ್ರ ಜಡೇಜ(10) ನಿರಾಸೆಗೊಳಿಸಿದರು.
ನಾಯಕ ವಿರಾಟ್ ಕೊಹ್ಲಿ ಬರೋಬ್ಬರಿ 50 ರನ್(96 ಎಸೆತ)ಗಳಿಸಿ ರಾಬಿನ್ಸನ್ ಗೆ ವಿಕೆಟ್ ಒಪ್ಪಿಸಿದರು. ಕೆಳ ಕ್ರಮಾಂಕದಲ್ಲಿ ಶಾರ್ದೂಲ್ ಠಾಕೂರ್ 57 ರನ್(36 ಎಸೆತ, 7 ಬೌಂ, 3 ಸಿ.) ಗಳಿಸಿ ಗಮನ ಸೆಳೆದರು. ಆದರೆ ಬ್ಯಾಟ್ಸ್ ಮನ್ ಗಳ ವೈಫಲ್ಯ ಭಾರತಕ್ಕೆ ದುಬಾರಿಯಾಯಿತು.
Next Story