ಐಪಿಎಲ್ ಫೈನಲ್: ಟಾಸ್ ಜಯಿಸಿದ ಕೋಲ್ಕತಾ ಮೊದಲು ಫೀಲ್ಡಿಂಗ್ ಆಯ್ಕೆ
photo: twitter
ದುಬೈ: ಐಪಿಎಲ್ ಫೈನಲ್ ಪಂದ್ಯದಲ್ಲಿ ಎಂ.ಎಸ್. ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಶುಕ್ರವಾರ ಟಾಸ್ ಜಯಿಸಿದ ಇಯಾನ್ ಮೋರ್ಗನ್ ನಾಯಕತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು.
ಅಂಕಿ-ಅಂಶದ ಪ್ರಕಾರ ದುಬೈ ಸ್ಟೇಡಿಯಂ ಪಿಚ್ ನಲ್ಲಿ ಮೊದಲು ಫೀಲ್ಡಿಂಗ್ ಮಾಡುವುದು ಉತ್ತಮ ಆಯ್ಕೆ. ಈ ಸ್ಟೇಡಿಯಂನಲ್ಲಿ ನಡೆದ ಕಳೆದ 8 ಪಂದ್ಯಗಳಲ್ಲಿ ರನ್ ಚೇಸಿಂಗ್ ಮಾಡಿರುವ ತಂಡವೇ ಗೆಲುವು ಸಾಧಿಸಿದೆ. ಸೆ.19ರಂದು ಮೊದಲ ಪಂದ್ಯ ನಡೆದ ಬಳಿಕ ಈ ಪಿಚ್ ಅನ್ನು ಬಳಸಲಾಗಿಲ್ಲ.
Next Story