ನೇಪಾಳ ತಂಡವನ್ನು ಮಣಿಸಿದ ಭಾರತದ ಫುಟ್ಬಾಲ್ ತಂಡಕ್ಕೆ ಸ್ಯಾಫ್ ಚಾಂಪಿಯನ್ ಶಿಪ್ ಕಿರೀಟ
photo: AIFF
ಮಾಲ್ಡೀವ್ಸ್, ಅ.16: ನೇಪಾಳ ತಂಡವನ್ನು 3-0 ಗೋಲುಗಳ ಅಂತರದಿಂದ ಮಣಿಸಿದ ಭಾರತದ ಫುಟ್ಬಾಲ್ ತಂಡ 8ನೇ ಬಾರಿ ಸ್ಯಾಫ್ ಚಾಂಪಿಯನ್ ಶಿಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತದ ಪರ ಸುನೀಲ್ ಚೆಟ್ರಿ(49ನೇ ನಿಮಿಷ), ಸುರೇಶ್ ಸಿಂಗ್ (50ನೇ ನಿಮಿಷ) ಹಾಗೂ ಅಬ್ದುಲ್ ಸಮದ್(90+1)ತಲಾ ಒಂದು ಗೋಲು ಗಳಿಸಿದರು. ಮೊದಲ ಬಾರಿ ಚಾಂಪಿಯನ್ ಶಿಪ್ ನಲ್ಲಿ ಫೈನಲ್ ತಲುಪಿದ್ದ ನೇಪಾಳ ನಿರಾಶದಾಯಕ ಪ್ರದರ್ಶನ ನೀಡಿತು.
ಮೊದಲಾರ್ಧದ ಅಂತ್ಯಕ್ಕೆ ಉಭಯ ತಂಡಗಳು ಗೋಲು ಗಳಿಸಲು ವಿಫಲವಾಗಿದ್ದವು.
ಭಾರತವು ಈ ಹಿಂದೆ 1993, 1997, 1999, 2005, 2009, 2011, 2015ರಲ್ಲಿ ಸ್ಯಾಫ್ ಚಾಂಪಿಯನ್ ಶಿಪ್ ಪ್ರಶಸ್ತಿಯನ್ನು ಜಯಿಸಿತ್ತು.
Next Story