ಫೆ.7,8ರಂದು ಬೆಂಗಳೂರಿನಲ್ಲಿ ಮೆಗಾ ಐಪಿಎಲ್ ಹರಾಜು?
photo:iplt20.com
ಹೊಸದಿಲ್ಲಿ, ಡಿ.22: ಬೆಂಗಳೂರಿನಲ್ಲಿ ಫೆಬ್ರವರಿ 7 ಹಾಗೂ 8ರಂದು ಎರಡು ದಿನಗಳ ಕಾಲ ಐಪಿಎಲ್ನ ಮೆಗಾ ಹರಾಜು ಪ್ರಕ್ರಿಯೆಯನ್ನು ನಡೆಸಲು ಬಿಸಿಸಿಐ ಯೋಜನೆ ಹಾಕಿಕೊಂಡಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಹೆಚ್ಚಿನ ಫ್ರಾಂಚೈಸಿಗಳು ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಬೇಕೆಂದು ಬಯಸುತ್ತಿರುವ ಕಾರಣ ಇದು ಬಿಸಿಸಿಐ ನಡೆಸುವ ಕೊನೆಯ ಮೆಗಾ ಹರಾಜು ಕಾರ್ಯಕ್ರಮವಾಗುವ ಸಾಧ್ಯತೆಯಿದೆ.
ನಾವು ಐಪಿಎಲ್ ಮೆಗಾ ಹರಾಜನ್ನು ಭಾರತದಲ್ಲಿ ನಡೆಸಲಿದ್ದೇವೆ. ಎರಡು ದಿನಗಳ ಈವೆಂಟ್ ಫೆಬ್ರವರಿ 7 ಹಾಗೂ 8ರಂದು ನಡೆಯಲಿದೆ. ಈ ಹಿಂದಿನಂತೆ ಬೆಂಗಳೂರಿನಲ್ಲಿಯೇ ಹರಾಜು ನಡೆಸಲು ಯೋಜಿಸಿದ್ದೇವೆ. ಸಿಧತೆಗಳು ನಡೆಯುತ್ತಿವೆ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು.
ಈ ಬಾರಿ ಐಪಿಎಲ್ನಲ್ಲಿ 10 ತಂಡಗಳು ಇರುತ್ತವೆ. ಸಂಜಯ್ ಗೊಯೆಂಕಾ ಮಾಲಕತ್ವದ ಲಕ್ನೊ ಫ್ರಾಂಚೈಸಿಯು ಸಿವಿಸಿ ಮಾಲಕತ್ವದ ಅಹ್ಮದಾಬಾದ್ ಫ್ರಾಂಚೈಸಿಗಳು ಈ ವರ್ಷದ ಐಪಿಎಲ್ನಲ್ಲಿ ಮೊದಲ ಬಾರಿ ಆಡಲು ಸಜ್ಜಾಗಿವೆ.
Next Story