ಬೋಪಣ್ಣ-ಮಿಡ್ಲ್ಕೂಪ್ ಪ್ರಿ-ಕ್ವಾರ್ಟರ್ ಫನಲ್ಗೆ
ಪ್ಯಾರಿಸ್: ಭಾರತದ ರೋಹನ್ ಬೋಪಣ್ಣ ಹಾಗೂ ಅವರ ಡಚ್ ಜೊತೆಗಾರ ಮ್ಯಾಟ್ವೆ ಮಿಡ್ಲ್ ಕೂಪ್ ಫ್ರೆಂಚ್ ಓಪನ್ನ ಪುರುಷರ ಡಬಲ್ಸ್ ಸ್ಪರ್ಧೆಯಲ್ಲಿ ಪ್ರಿ-ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಬೋಪಣ್ಣ ಹಾಗೂ ಮಿಡ್ಲ್ಕೂಪ್ ಗುರುವಾರ ಒಂದು ಗಂಟೆ, 6 ನಿಮಿಷಗಳ ಕಾಲ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಆ್ಯಂಡ್ರೆ ಗೊಲುಬೆವ್ ಹಾಗೂ ಫ್ಯಾಬ್ರೈಸ್ ಮಾರ್ಟಿನ್ ವಿರುದ್ಧ 6-3, 6-4 ನೇರ ಸೆಟ್ಗಳ ಅಂತರದಿಂದ ಗೆಲುವು ದಾಖಲಿಸಿದರು.
ಬೋಪಣ್ಣ ಅವರು ಆವೆಮಣ್ಣಿನ ಟೆನಿಸ್ ಕೋರ್ಟ್ ನಲ್ಲಿ ಶ್ರೇಷ್ಠ ದಾಖಲೆ ಹೊಂದಿದ್ದು, 2011, 2016, 2018 ಹಾಗೂ 2021ರಲ್ಲಿ ಅಂತಿಮ-8ರ ಸುತ್ತು ತಲುಪಿದ್ದಾರೆ.
Next Story