ಎರಡನೇ ಟ್ವೆಂಟಿ-20: ಭಾರತಕ್ಕೆ 91 ರನ್ ಗುರಿ ನೀಡಿದ ಆಸ್ಟ್ರೇಲಿಯ
ಮತ್ತೆ ಅಬ್ಬರಿಸಿದ ಮ್ಯಾಥ್ಯೂ ವೇಡ್, ಅಕ್ಷರ್ ಪಟೇಲ್ಗೆ 2 ವಿಕೆಟ್
ನಾಗ್ಪುರ, ಸೆ.23: ಮಳೆಯಿಂದಾಗಿ ವಿಳಂಬವಾದ ಎರಡನೇ ಟ್ವೆಂಟಿ-20 ಅಂತರ್ರಾಷ್ಟ್ರೀಯ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯ ತಂಡ ಭಾರತ ವಿರುದ್ಧ 8 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 90 ರನ್ ಗಳಿಸಿದೆ.
ಶುಕ್ರವಾರ ಆಸ್ಟ್ರೇಲಿಯದ ಪರ ವಿಕೆಟ್ಕೀಪರ್-ಬ್ಯಾಟರ್ ಮ್ಯಾಥ್ಯೂ ವೇಡ್(ಔಟಾಗದೆ 43 ರನ್, 20 ಎಸೆತ, 4 ಬೌಂಡರಿ, 3 ಸಿಕ್ಸರ್)ಸರ್ವಾಧಿಕ ಸ್ಕೋರ್ ಗಳಿಸಿದರು.
ನಾಯಕ ಆ್ಯರೊನ್ ಫಿಂಚ್(31 ರನ್, 15 ಎಸೆತ, 4 ಬೌಂ,1 ಸಿ.)ಎರಡಂಕೆಯ ಸ್ಕೋರ್ ಗಳಿಸಿದರು.
ಭಾರತದ ಪರ ಅಕ್ಷರ್ ಪಟೇಲ್ (2-13)ಯಶಸ್ವಿ ಬೌಲರ್ ಎನಿಸಿಕೊಂಡರು. ತಂಡಕ್ಕೆ ವಾಪಸಾಗಿರುವ ಜಸ್ಪ್ರಿತ್ ಬುಮ್ರಾ 22 ರನ್ಗೆ 1 ವಿಕೆಟ್ ಪಡೆದರು.
ಭಾರತ ಆಡುವ 11ರ ಬಳಗದಲ್ಲಿ 2 ಬದಲಾವಣೆ ಮಾಡಿದೆ. ಉಮೇಶ್ ಯಾದವ್ ಬದಲಿಗೆ ಜಸ್ಪ್ರೀತ್ ಬುಮ್ರಾ ಹಾಗೂ ಭುವನೇಶ್ವರ ಕುಮಾರ್ ಬದಲಿಗೆ ರಿಷಭ್ ಪಂತ್ರನ್ನು ಸೇರಿಸಿಕೊಳ್ಳಲಾಗಿದೆ.
Next Story