ಯುಎಸ್ ಓಪನ್: ಪೇಸ್, ಸಾನಿಯಾ, ಬೋಪಣ್ಣ ಶುಭಾರಂಭ
ನ್ಯೂಯಾರ್ಕ್, ಸೆ.1: ಭಾರತೀಯ ಟೆನಿಸ್ ತಾರೆಯರಾದ ಲಿಯಾಂಡರ್ ಪೇಸ್, ಸಾನಿಯಾ ಮಿರ್ಝಾ ಹಾಗೂ ರೋಹನ್ ಬೋಪಣ್ಣ ಯುಎಸ್ ಓಪನ್ನಲ್ಲಿ ಶುಭಾರಂಭ ಮಾಡಿದ್ದಾರೆ. ಈ ಮೂವರು ತಮ್ಮ ಮೊದಲ ಸುತ್ತಿನ ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ.
ಬುಧವಾರ ಭಾರತದ ಪರ ಗೆಲುವಿನ ಖಾತೆ ತೆರೆದ ಬೋಪಣ್ಣ ಪುರುಷರ ಡಬಲ್ಸ್ನಲ್ಲಿ ಡೆನ್ಮಾರ್ಕ್ನ ಫೆಡೆರಿಕ್ ನೆಲ್ಸನ್ರೊಂದಿಗೆ ಕಣಕ್ಕಿಳಿದು ರಾಡೆಕ್ ಸ್ಟೆಪನೆಕ್ ಹಾಗೂ ನೆನಾಡ್ ಝಿಮೊಂಜಿಕ್ರನ್ನು 6-3, 6-7(3), 6-3 ಸೆಟ್ಗಳ ಅಂತರದಿಂದ ಮಣಿಸಿದ್ದಾರೆ.
ಮಹಿಳೆಯರ ಡಬಲ್ಸ್ನ ಮೊದಲ ಸುತ್ತಿನಲ್ಲಿ ವಿಶ್ವದ ನಂ.1 ಡಬಲ್ಸ್ ಆಟಗಾರ್ತಿ ಸಾನಿಯಾ ಮಿರ್ಝಾ ಅವರು ಝೆಕ್ನ ಬಾರ್ಬೊರಾ ಸ್ಟ್ರಿಕೋವಾ ಜೊತೆಗೂಡಿ ಅಮೆರಿಕದ ಶ್ರೇಯಾಂಕರಹಿತ ಜೋಡಿ ಜಾಡಾ ಮಿಯಿ ಹರ್ಟ್ ಹಾಗೂ ಎನಾ ಶಿಬಹರಾರನ್ನು 6-2, 6-3 ಸೆಟ್ಗಳ ಅಂತರದಿಂದ ಸೋಲಿಸಿದ್ದಾರೆ.
ಮಿಶ್ರ ಡಬಲ್ಸ್ನಲ್ಲಿ ಹಿರಿಯ ಆಟಗಾರ ಪೇಸ್ ಸ್ವಿಸ್ನ ಮಾರ್ಟಿನಾ ಹಿಂಗಿಸ್ ಜೊತೆಗೂಡಿ ಅಮೆರಿಕದ ಸಚಿಯಾ ವಿಕೆರಿ ಹಾಗೂ ಫ್ರಾನ್ಸಿಸ್ ಟಿಯಾಫೋರನ್ನು 6-3, 6-2 ಸೆಟ್ಗಳ ಅಂತರದಿಂದ ಮಣಿಸಿದ್ದಾರೆ.
ಒಂದು ಗಂಟೆ, 53 ನಿಮಿಷಗಳ ಹೋರಾಟದಲ್ಲಿ ಜಯ ಸಂಪಾದಿಸಿರುವ ಬೋಪಣ್ಣ-ನೆಲ್ಸನ್ ಜೋಡಿ ಮುಂದಿನ ಸುತ್ತಿನಲ್ಲಿ ಅಮೆರಿಕ-ನ್ಯೂಝಿಲೆಂಡ್ ಜೋಡಿ ಬ್ರಿಯಾನ್ ಬಾಕೆರ್ ಹಾಗೂ ಮಾರ್ಕಸ್ ಡೇನಿಯಲ್ರನ್ನು ಎದುರಿಸಲಿದ್ದಾರೆ.
.............