ಮೆಸ್ಸಿ ಸಿಂಗಾಪುರ ವಿರುದ್ಧದ ಪಂದ್ಯಕ್ಕಿಲ್ಲ
ಸಿಂಗಾಪುರ, ಜೂ.11: ಅರ್ಜೆಂಟೀನ ದ ಸೂಪರ್ ಸ್ಟಾರ್ ಲಿಯೊನೆಲ್ ಮೆಸ್ಸಿ ಮುಂದಿನ ವಾರ ನಡೆಯಲಿರುವ ಸಿಂಗಾಪುರ ವಿರುದ್ಧದ ಸೌಹಾರ್ದ ಪಂದ್ಯದಿಂದ ಹೊರಗುಳಿಯಲಿದ್ದಾರೆ.
ಮೆಸ್ಸಿ ಅವರೊಂದಿಗೆ ಗೊಂಝಾಲೊ ಹಿಗುಯನ್ ಮತ್ತು ನಿಕೊಲಾಸ್ ಒಟಾಮೆಂಡಿ ತಂಡದ ಸೇವೆಗೆ ಲಭ್ಯರಿಲ್ಲ.
ಮೆಸ್ಸಿ ಮತ್ತು ಡಿಫೆಂಡರ್ ಒಟಾಮೆಮಡ್ ವಿವಾಹದ ಹಿನ್ನೆಲೆಯಲ್ಲಿ ಆಡುತ್ತಿಲ್ಲ. ಮೆಸ್ಸಿ ಅವರು ತನ್ನ ಗರ್ಲ್ಫ್ರೆಂಡ್ ಆ್ಯಂಟೊನೆಲ್ಲಾ ರೊಕುರೊ ಅವರನ್ನು ಜೂನ್ 30ರಂದು ವಿವಾಹವಾಗಲಿದ್ದಾರೆ. ಒಟಾಮೆಂಡಿ ಅವರ ವಿವಾಹ ಜೂನ್ 16ರಂದು ನಿಗದಿಯಾಗಿದೆ.
ಮೆಸ್ಸಿ ಗೈರು ಅವರ ಅಭಿಮಾನಿಗಳನ್ನು ನಿರಾಸೆಗೊಳಿಸಿದೆ. ಅರ್ಜೆಂಟೀನ ತಂಡ ಫಿಫಾ ರ್ಯಾಂಕಿಂಗ್ನಲ್ಲಿ 2ನೆ ಸ್ಥಾನ ಪಡೆದಿದೆ. ಇಲ್ಲಿನ ನ್ಯಾಶನಲ್ ಸ್ಟೇಡಿಯಮ್ನಲ್ಲಿ ಜೂನ್ 13ರಂದು ನ್ಯಾಶನಲ್ ಸ್ಟೇಡಿಯಂನಲ್ಲಿ ಸಿಟಿ ಸ್ಟೇಟ್ಸ್ ಫುಟ್ಬಾಲ್ ಅಸೋಸಿಯೇಶನ್ನ 125ನೆ ವರ್ಷಾಚರಣೆಯ ಅಂಗವಾಗಿ ಆಯೋಜಿಸಲಾದ ಸೌಹಾರ್ದ ಪಂದ್ಯದಲ್ಲಿ ಫಿಫಾ ರ್ಯಾಂಕಿಂಗ್ನಲ್ಲಿ 159ನೆ ಸ್ಥಾನದಲ್ಲಿರುವ ಸಿಂಗಾಪುರ ತಂಡವನ್ನು ಅರ್ಜೆಂಟೀನ ಎದುರಿಸಲಿದೆ.
Next Story