ರಾಹುಲ್, ಅರ್ಜುನ್-ಶ್ಲೋಕ್ ಸೆಮಿ ಫೈನಲ್ಗೆ
ರಶ್ಯನ್ ಗ್ರಾನ್ಪ್ರಿ
ಮಾಸ್ಕೊ, ಜು.21: ರಶ್ಯನ್ ಓಪನ್ ಗ್ರಾನ್ಪ್ರಿ ಬ್ಯಾಡ್ಮಿಂಟನ್ ಟೂರ್ನಮೆಂಟ್ನಲ್ಲಿ ಪುರುಷರ ಸಿಂಗಲ್ಸ್ನಲ್ಲಿ ಭಾರತದ ರಾಹುಲ್ ಯಾದವ್ ಹಾಗೂ ಪುರುಷರ ಡಬಲ್ಸ್ನಲ್ಲಿ ಅರ್ಜುನ್ ಎಂಆರ್ ಹಾಗೂ ರಾಮಚಂದ್ರನ್ ಶ್ಲೋಕ್ ಸೆಮಿ ಫೈನಲ್ಗೆ ಪ್ರವೇಶಿಸಿದ್ದಾರೆ.
ಇಲ್ಲಿ ಶುಕ್ರವಾರ 22 ನಿಮಿಷಗಳಲ್ಲಿ ಕೊನೆಗೊಂಡ ಪುರುಷರ ಸಿಂಗಲ್ಸ್ನ ಕ್ವಾರ್ಟರ್ ಫೈನಲ್ನಲ್ಲಿ 19ರ ಹರೆಯದ ರಾಹುಲ್ ಇಂಗ್ಲೆಂಡ್ನ ವಾಂಗ್ ಯುಹಾಂಗ್ರನ್ನು 13-11, 11-5, 11-6 ಗೇಮ್ಗಳ ಅಂತರದಿಂದ ಮಣಿಸಿದರು. ಸೆಮಿಫೈನಲ್ನಲ್ಲಿದ್ವಿತೀಯ ಶ್ರೇಯಾಂಕದ ವ್ಲಾಡಿಮಿರ್ ಮಾಲ್ಕೊವ್ರನ್ನು ಎದುರಿ ಸಲಿದ್ದಾರೆ.
ನಾಲ್ಕನೆ ಶ್ರೇಯಾಂಕದ ಅರ್ಜುನ್ ಹಾಗೂ ಶ್ಲೋಕ್ ಜೋಡಿ ಪುರುಷರ ಡಬಲ್ಸ್ನ ಕ್ವಾರ್ಟರ್ ಫೈನಲ್ನಲ್ಲಿ ಜಪಾನ್ನ ಮಸಾಟೊ ಟಕಾನೊ ಹಾಗೂ ಯೊಶಿಕಿ ಸುಕಮೊಟೊರನ್ನು 7-11, 11-9, 11-8, 11-9 ಗೇಮ್ಗಳ ಅಂತರದಿಂದ ಸೋಲಿಸಿದೆೆ.
ಅರ್ಜುನ್-ಶ್ಲೋಕ್ ಜೋಡಿ ಮುಂದಿನ ಸುತ್ತಿನಲ್ಲಿ ವ್ಲಾಡಿಮಿರ್ ಹಾನೊವ್ ಹಾಗೂ ಇವಾನ್ ಸೊರೊನೊವ್ರನ್ನು ಎದು ರಿಸಲಿದೆೆ. ಈ ಜೋಡಿ 2016ರ ಆಲ್ ಇಂಗ್ಲೆಂಡ್ ಸೂಪರ್ ಸರಣಿಯನ್ನು ಜಯಿಸಿದೆ.
ಮತ್ತೊಂದು ಸಿಂಗಲ್ಸ್ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ 8ನೆ ಶ್ರೇಯಾಂಕದ ಆನಂದ್ ಪವಾರ್ ಅವರು ವ್ಲಾಡಿಮಿರ್ ವಿರುದ್ಧ 4-11, 11-7, 8-11, 3-11 ಅಂತರದಿಂದ ಸೋತಿದ್ದಾರೆ.
ಆರನೆ ಶ್ರೇಯಾಂಕದ ರಸಿಕಾ ರಾಜೆ ಮಹಿಳೆಯರ ಸಿಂಗಲ್ಸ್ ನಲ್ಲಿ ಜಪಾನ್ನ ನಟ್ಸುಕಿ ನಿಡೈರಾ ವಿರುದ್ಧ 2-11, 4-11, 7-11 ಅಂತರದಿಂದ ಶರಣಾಗಿ ಟೂರ್ನಿಯಿಂದ ಹೊರ ನಡೆದಿದ್ದಾರೆ.