ರಾಹುಲ್, ಮನು-ಸುಮೀತ್ಗೆ ಪ್ರಶಸ್ತಿ
ಲಾಗೊಸ್ ಬ್ಯಾಡ್ಮಿಂಟನ್ ಓಪನ್
ಹೊಸದಿಲ್ಲಿ, ಜು.31: ನೈಜೀರಿಯದಲ್ಲಿ ನಡೆದ ಲಾಗೊಸ್ ಇಂಟರ್ನ್ಯಾಶನಲ್ ಚಾಲೆಂಜ್ನಲ್ಲಿ ಭಾರತದ ಶಟ್ಲರ್ ಸಿ.ರಾಹುಲ್ ಯಾದವ್ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡರು. ಪುರುಷರ ಡಬಲ್ಸ್ ಜೋಡಿ ಮನು ಅತ್ರಿ ಹಾಗೂ ಬಿ.ಸುಮೀತ್ ರೆಡ್ಡಿ ಡಬಲ್ಸ್ ಪ್ರಶಸ್ತಿಯನ್ನು ಜಯಿಸಿದೆ. ನಾಲ್ಕನೆ ಶ್ರೇಯಾಂಕದ ರಾಹುಲ್ ಪುರುಷರ ಸಿಂಗಲ್ಸ್ನ ಫೈನಲ್ನಲ್ಲಿ ಸಹ ಆಟಗಾರ ಕರಣ್ ರಾಜನ್ ರಾಜರಾಜನ್ರನ್ನು 21-15, 21-13 ಗೇಮ್ಗಳ ಅಂತರದಿಂದ ಮಣಿಸಿದರು. ಕಳೆದ ವರ್ಷ ಮಾರಿಷಸ್ ಓಪನ್ ಪ್ರಶಸ್ತಿಯನ್ನು ಜಯಿಸಿದ್ದ 19ರ ಹರೆಯದ ರಾಹುಲ್ ಸೆಮಿಫೈನಲ್ನಲ್ಲಿ ಅಗ್ರ ಶ್ರೇಯಾಂಕದ ಹಾಗೂ ವಿಶ್ವದ ನಂ.55ನೆ ಆಟಗಾರ ಮಿಶಾ ಝಿಲ್ಬೆರ್ಮನ್ರನ್ನು ಮಣಿಸಿದರು.
ಹೈದರಾಬಾದ್ನ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡಮಿಯ ಶಟ್ಲರ್ ರಾಹುಲ್ ಇತ್ತೀಚೆಗಷ್ಟೇ ರಶ್ಯನ್ ಓಪನ್ ಗ್ರಾನ್ಪ್ರಿ ಟೂರ್ನಿಯಲ್ಲಿ ಕಂಚಿನ ಪದಕ ಜಯಿಸಿದ್ದರು.
ಡಬಲ್ಸ್ ಪಂದ್ಯದ ಫೈನಲ್ನಲ್ಲಿ ಅಗ್ರ ಶ್ರೇಯಾಂಕದ ಮನು ಹಾಗೂ ಸುಮೀತ್ ಸ್ಥಳೀಯ ಜೋಡಿ ಗೊಡ್ವಿನ್ ಒಲೊಫು ಹಾಗೂ ಅನೊಲುವಾಪೊ ಜುವಾನ್ರನ್ನು 21-13, 21-15 ಗೇಮ್ಗಳ ಅಂತರದಿಂದ ಸೋಲಿಸಿದ್ದಾರೆ.
ಮಹಿಳೆಯರ ಸಿಂಗಲ್ಸ್ನಲ್ಲಿ ಭಾರತದ ಮುಗ್ದೋ ಅಗ್ರೆ ಫೈನಲ್ನಲ್ಲಿ ಶ್ರೀಲಂಕಾದ ಥಿಲಿನಿ ಪ್ರಮೋದಿಕಾ ವಿರುದ್ಧ 12-21, 14-21 ಗೇಮ್ಗಳ ಅಂತರದಿಂದ ಸೋಲುವುದರೊಂದಿಗೆ ರನ್ನರ್-ಅಪ್ಗೆ ತೃಪ್ತಿಪಟ್ಟರು.