ಗುಣಮಟ್ಟದ ಬೌಲಿಂಗ್ನಿಂದ ಟೀಂ ಇಂಡಿಯ ಬಲಿಷ್ಠ: ವಿರಾಟ್ ಕೊಹ್ಲಿ
ಕೋಲ್ಕತಾ, ಸೆ.22: ಉತ್ಕೃಷ್ಟಮಟ್ಟದ ಬೌಲಿಂಗ್ ನೆರವಿನಿಂದ ಭಾರತ ಕ್ರಿಕೆಟ್ ತಂಡವು ಬಲಿಷ್ಠವಾಗಿದೆ ಎಂದು ಕೋಲ್ಕತಾದ ಈಡನ್ಗಾರ್ಡನ್ಸ್ ನಲ್ಲಿ ಆಸ್ಟ್ರೇಲಿಯ ವಿರುದ್ಧ ನಡೆದ 2ನೆ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸಿದ ನಂತರ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ. ಭಾರತವು ಕೇವಲ 252 ರನ್ ಗಳಿಸಿಯೂ ಬೌಲರ್ಗಳ ನೆರವಿನಿಂದ ಪಂದ್ಯವನ್ನು ಗೆದ್ದಿದೆ ಎಂದರು. ‘‘ಭುವಿಯ ಬೌಲಿಂಗ್ ಕೋಟಾವು ಅತ್ಯುತ್ತಮವಾಗಿತ್ತು. ಆಸ್ಟ್ರೇಲಿಯದ ಆರಂಭಿಕ ಬ್ಯಾಟಿಂಗ್ ಜೋಡಿಯನ್ನು ಬೇರ್ಪಡಿಸಿ ಮಧ್ಯಮ ಕ್ರಮಾಂಕದಲ್ಲಿ ಸ್ಪಿನ್ನರುಗಳು ತಮ್ಮ ಕೈಚಳಕ ತೋರಿಸಲು ಅವಕಾಶ ಮಾಡಿಕೊಟ್ಟರು. ಇಬ್ಬರು ಸ್ಪಿನ್ನರ್ಗಳು ಉತ್ತಮ ಬೌಲಿಂಗ್ ಗುಣಮಟ್ಟವನ್ನು ಕಾಯ್ದುಕೊಂಡು ಪಂದ್ಯ ಗೆಲ್ಲಲು ಸಹಕರಿಸಿದರು’’ ಎಂದು 107 ಎಸೆತದಲ್ಲಿ 92 ರನ್ ಗಳಿಸಿ ಪಂದ್ಯಶ್ರೇಷ್ಠ ಪುರಸ್ಕೃತರಾದ ಭಾರತ ಕ್ರಿಕೆಟ್ ತಂಡದ ನಾಯಕ ಕೊಹ್ಲಿ ಹೇಳಿದರು.
Next Story