ಸೆಹ್ವಾಗ್ಗೆ ಬಿಎಂಡಬ್ಲ್ಯು ಕಾರು ಉಡುಗೊರೆ ನೀಡಿದ ಸಚಿನ್
ಮುಂಬೈ, ಸೆ.27: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರು ತನ್ನಲ್ಲಿದ್ದ ಒಂದು ಕೋಟಿ ರೂಪಾಯಿಗೂ ಅಧಿಕ ವೌಲ್ಯದ ಬಿಎಂಡಬ್ಲು ಕಾರನ್ನು ತನ್ನ ಆತ್ಮೀಯ ಸ್ನೇಹಿತ, ದಿಲ್ಲಿಯ ಮಾಜಿ ಆರಂಭಿಕ ದಾಂಡಿಗ ವೀರೇಂದ್ರ ಸೆಹ್ವಾಗ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.
ಸಚಿನ್ ಅವರು ಬಿಎಂಡಬ್ಲು 7 ಸಿರೀಸ್ 730 ಎಲ್ಡಿ ಕಾರನ್ನು ಉಡುಗೊರೆಯಾಗಿ ನೀಡಿರುವುದನ್ನು ಸೆಹ್ವಾಗ್ ಟ್ವಿಟರ್ನಲ್ಲಿ ಬಹಿರಂಗಪಡಿಸಿದ್ದಾರೆ. ಸುಮಾರು 1.14 ಕೋಟಿ ರೂ. ವೌಲ್ಯದ ಈ ಕಾರಿನೊಂದಿಗಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ ಹಾಗೂ ಸಚಿನ್ಗೆ ಧನ್ಯವಾದ ಹೇಳಿದ್ದಾರೆ.
ಸಚಿನ್ ಮತ್ತು ಸೆಹ್ವಾಗ್ 2002ರಿಂದ 2012ರ ತನಕ ಭಾರತದ ಕ್ರಿಕೆಟ್ ತಂಡದ ಪರ ಆರಂಭಿಕ ದಾಂಡಿಗರಾಗಿ ಆಡಿದ್ದರು. ಇವರ ಜೊತೆಯಾಟದಲ್ಲಿ 3,919 ರನ್ ದಾಖಲಾಗಿತ್ತು. 2011ರ ವಿಶ್ವಕಪ್ನಲ್ಲಿ ಜೊತೆಯಾಗಿ ಆಡಿದ್ದರು.
Next Story