-

ಯುಪಿಎಸ್ಸಿ (ಐಎಎಸ್) ಪ್ರಿಲಿಮ್ಸ್ ಪರೀಕ್ಷೆ 2017

ನಿಮ್ಮ ಯಶಸ್ಸಿಗೆ ಇಲ್ಲಿದೆ ಗೈಡ್

-

ಹೊಸದಿಲ್ಲಿ,ಫೆ.15: ಕೇಂದ್ರ ಲೋಕಸೇವಾ ಆಯೋಗವು ನಾಗರಿಕ ಸೇವೆಗಳ ಪ್ರಿಲಿಮಿನರಿ ಪರೀಕ್ಷೆಯನ್ನು ಬರುವಜೂನ್ 18ರಂದು ನಡೆಸುವ ಸಾಧ್ಯತೆಯಿದೆ. ಐಎಎಸ್,ಐಎಫ್‌ಎಸ್,ಐಪಿಎಸ್ ಇತ್ಯಾದಿ ಶ್ರೇಣಿಗಳಲ್ಲಿ ಅಧಿಕಾರಿಗಳ ಆಯ್ಕೆಗಾಗಿ ಯುಪಿಎಸ್‌ಸಿ ಪ್ರತಿವರ್ಷ ನಾಗರಿಕ ಸೇವಾ ಪರೀಕ್ಷೆಗಳನ್ನು ನಡೆಸುತ್ತದೆ.

ಪ್ರಿಲಿಮಿನರಿ,ಮೇನ್ ಮತ್ತು ಸಂದರ್ಶನ ಹೀಗೆಮೂರುಹಂತಗಳಲ್ಲಿ ಪರೀಕ್ಷೆ ನಡೆಯುತ್ತದೆ. ಪರೀಕ್ಷೆಯ ಪಠ್ಯಕ್ರಮವು ವಿಶಾಲವಾಗಿದೆ. ಅಭ್ಯರ್ಥಿಯು ಮೇನ್ಸ್‌ಗಾಗಿ ತಾನು ಆಯ್ಕೆಮಾಡಿಕೊಂಡಿರುವ ಐಚ್ಛಿಕ ವಿಷಯಗಳಲ್ಲಿ ತುಂಬ ಜಾಣನಿದ್ದರೂ ಪ್ರಿಲಿಮಿನರಿಯಲ್ಲಿ ಅನುತ್ತೀರ್ಣಗೊಂಡರೆ ಅದು ಮೊದಲ ಹಂತದಲ್ಲಿಯೇ ಆತನ ಕನಸನ್ನು ಕಮರಿಸುತ್ತದೆ.

ಆದರೆ ಈ ಪ್ರಿಲಿಮಿನರಿಗೆ ಸಿದ್ಧತೆಯನ್ನು ಮಾಡಿಕೊಳ್ಳುವುದು ಹೇಗೆ?

ಪರೀಕ್ಷೆಗೆ ನಾಲ್ಕು ತಿಂಗಳುಗಳುಮಾತ್ರ ಉಳಿದಿದ್ದು, ಕಠಿಣ ಅಭ್ಯಾಸ ಮಾತ್ರವಲ್ಲ... ಯೋಜನಾಬದ್ಧವಾದಅಭ್ಯಾಸವೂಮಹತ್ವದ್ದಾಗಿದೆ. ಪ್ರಿಲಿಮ್ಸ್‌ನ ಮಾದರಿ ಮತ್ತು ಪಠ್ಯಕ್ರಮವನ್ನು ಸಮಗ್ರವಾಗಿ ಅರಿತುಕೊಳ್ಳುವದು ಪರೀಕ್ಷೆಯ ಸಿದ್ಧತೆಯಲ್ಲಿ ಮೊದಲ ಹೆಜ್ಜೆಯಾಗಿದೆ.

ಪ್ರಿಲಿಮಿನರಿ ಪರೀಕ್ಷೆಯು ಆಬ್ಜೆಕ್ಟಿವ್ ಮಾದರಿ ಅಥವಾ ಬಹು ಆಯ್ಕೆಯ ಪ್ರಶ್ನೆಗಳನ್ನೊಳಗೊಂಡ ಎರಡು ಪ್ರಶ್ನೆಪತ್ರಿಕೆಗಳನ್ನು ಹೊಂದಿರುತ್ತದೆ: ಜನರಲ್ ಸ್ಟಡೀಸ್ (ಜಿಎಸ್)ಅಥವಾ ಪೇಪರ್ 1 ಮತ್ತು ಆ್ಯಪ್ಟಿಟ್ಯೂಡ್ ಅಥವಾ ಸಿವಿಲ್ ಸರ್ವಿಸಿಸ್ ಆ್ಯಪ್ಟಿಟ್ಯೂಡ್ ಟೆಸ್ಟ್(ಸಿಎಸ್‌ಎಟಿ) ಅಥವಾ ಪೇಪರ್ 2. ಜಿಎಸ್ ಪೇಪರ್‌ನಲ್ಲಿ ತಲಾ ಎರಡು ಅಂಕಗಳ 100 ಪ್ರಶ್ನೆಗಳಿದ್ದರೆ, ಸಿಎಸ್‌ಎಟಿಯಲ್ಲಿ ತಲಾ ಎರಡೂವರೆ ಅಂಕಗಳ 80 ಪ್ರಶ್ನೆಗಳಿರುತ್ತವೆ. ಪ್ರತಿ ತಪ್ಪು ಉತ್ತರಕ್ಕೆ ಆ ಪ್ರಶ್ನೆಗೆ ನಿಗದಿತ ಅಂಕದ ಶೇ.33ರಷ್ಟು ದಂಡ ಬೀಳುತ್ತದೆ.

ಪೇಪರ್ 2ರ ವೌಲ್ಯಮಾಪನವು ಮೊದಲು ನಡೆಯುತ್ತದೆ ಮತ್ತು ಅದರಲ್ಲಿ ಶೇ.33 ಅಥವಾ 66 ಅಂಕಗಳನ್ನು ಗಳಿಸಿದವರ ಪೇಪರ್ 1ನ್ನು ಮಾತ್ರ ವೌಲ್ಯಮಾಪನ ನಡೆಸಲಾಗುತ್ತದೆ. ಪೇಪರ್ 1ರಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಮೇನ್ಸ್ ಪರೀಕ್ಷೆಗಾಗಿ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ.

 ಪೇಪರ್ 1ರಲ್ಲಿ ಸುಮಾರು 125-130 ಅಂಕಗಳನ್ನು ಗಳಿಸುವ ಅಭ್ಯರ್ಥಿಗಳು ಸಿಎಸ್ ಮೇನ್ಸ್‌ಗೆ ಅರ್ಹತೆ ಪಡೆಯುತ್ತಾರೆಂದು ನಿರೀಕ್ಷಿಸಬಹುದು ಎನ್ನುತ್ತಾರೆ. ರಾವ್ಸ್ ಐಎಎಸ್ ಸ್ಟಡಿಸರ್ಕಲ್‌ನ ಕನ್ಸಲ್ಟಂಟ್ ಡಿ.ಪಿ.ಸಿಂಗ್. ಮೇನ್ಸ್‌ಗೆ ಪಟ್ಟಿ ಮಾಡಲಾಗುವ ಅಭ್ಯರ್ಥಿಗಳ ಸಂಖ್ಯೆ ತೆರವಾಗಿರುವ ಹುದ್ದೆಗಳ ಸುಮಾರು 13 ಪಟ್ಟುಇರುತ್ತದೆ.

  ಸಿಎಸ್ ಪ್ರಿಲಿಮಿನರಿ ಪರೀಕ್ಷೆಗೆ ಸಿದ್ಧತೆಗಳ ಕಾರ್ಯತಂತ್ರ ಕುರಿತು ಮಾತನಾಡಿದ ಸಿಂಗ್, ಇದೇಮೊದಲ ಬಾರಿಗೆ ಪ್ರಿಲಿಮಿನರಿಗೆ ಹಾಜರಾಗುತ್ತಿರುವ ಅಭ್ಯರ್ಥಿಗಳು ಕಳೆದ 10 ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಸಮಗ್ರವಾಗಿ ಅಧ್ಯಯನಮಾಡಿ ವಿಶ್ಲೇಷಿಸಬೇಕು. ಪ್ರಶ್ನೆಗಳನ್ನು ಕೇಳುವ ವಿಧಾನವು ಲಾಜಿಕ್‌ವೊಂದನ್ನು ಹೊಂದಿದ್ದು, ವಿದ್ಯಾರ್ಥಿಗಳು ಅದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಪ್ರಿಲಿಮಿನರಿ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಪ್ರಚಲಿತ ವಿದ್ಯಮಾನಗಳ ಜ್ಞಾನ ಅತ್ಯಂತ ಮುಖ್ಯವಾಗಿದೆ, ಆದರೆ ಅದೊಂದು ವ್ಯಾಪಕ ವಿಷಯವಾಗಿರುವುದರಿಂದ ಯಾವ ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಬಹುದು ಎನ್ನುವುದನ್ನು ಗುರುತಿಸಲು ಅಭ್ಯರ್ಥಿಗಳು ಪ್ರಯತ್ನಿಸಬೇಕಾಗುತ್ತದೆ ಎಂದು ಹೇಳಿದರು.

ಯಾವುದನ್ನು ಅಭ್ಯಾಸ ಮಾಡಬೇಕೆಂದು ಅಭ್ಯರ್ಥಿಗಳು ನಿರ್ಧರಿಸಿದರೆ ಅರ್ಧ ಯುದ್ದವನ್ನು ಗೆದ್ದಂತೆಯೇ. ಪರಿಸರ ಕ್ಷೇತ್ರದಲ್ಲಿನ ಇತ್ತೀಚಿನ ಬೆಳವಣಿಗೆಗಳು, ಇತ್ತೀಚಿನ ಕಾನೂನುಗಳು, ದೇಶದ ಸಂವಿಧಾನದ ಕುರಿತು ಜ್ಞಾನ, ಆರ್ಥಿಕ ಸಮೀಕ್ಷೆ ಸೇರಿದಂತೆ ಇತ್ತೀಚಿನ ಆರ್ಥಿಕ ವಿಷಯಗಳು, ತಮಿಳುನಾಡು ರಾಜಕೀಯ ಬೆಳವಣಿಗೆಗಳಲ್ಲಿ ರಾಜ್ಯಪಾಲರ ಪಾತ್ರ ಇತ್ಯಾದಿಗಳು ಪ್ರಶ್ನೆಗಳನ್ನು ನಿರೀಕ್ಷಿಸಲಾಗಿರುವ ಕೆಲವು ಮಹತ್ವದ ವಿಷಯಗಳಾಗಿವೆ ಎಂದು ಸಿಂಗ್ ತಿಳಿಸಿದರು.

 ಇಷ್ಟನ್ನು ಪೂರೈಸಿದ ಬಳಿಕ ಅಭ್ಯರ್ಥಿಗಳು ಪರೀಕ್ಷೆಯ ವಾತಾವರಣವನ್ನು ಕಲ್ಪಿಸಿಕೊಂಡು ಪರೀಕ್ಷೆಗಳಿಗೆ ಉತ್ತರಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಟಿಪ್ಪಣಿಗಳ ಉಜಳಣಿಯ ಜೊತೆಗೆ ಅವುಗಳನ್ನು ಸಾಧ್ಯವಾದಷ್ಟು ಸಂಕ್ಷಿಪ್ತಗೊಳಿಸಲು ಪ್ರಯತ್ನಿಸಬೇಕು. ಇದು ಕೊನೆಯ ಕೆಲವು ದಿನಗಳಲ್ಲಿ ಪರೀಕ್ಷೆಗಾಗಿ ಪುನರ್‌ಮನನ ಮಾಡಿಕೊಳ್ಳುವಲ್ಲಿ ನೆರವಾಗುತ್ತದೆ ಎಂದರು.

ಅಡ್ಡಾ 247ನ ಸ್ಥಾಪಕ ಹಾಗೂ ಸಿಇಒ ಅನಿಲ್ ನಗರ್ ಅವರೂ ಸಿಎಸ್ ಪ್ರಿಲಿಮಿನರಿಗೆ ಸಿದ್ಧತೆಯ ಬಗ್ಗೆ ಸಲಹೆಗಳನ್ನು ನೀಡಿದ್ದಾರೆ. ಅಭ್ಯರ್ಥಿಗಳು ಮೊದಲು ಎನ್‌ಸಿಇಆರ್‌ಟಿ ಪುಸ್ತಕಗಳೊಂದಿಗೆ ಉತ್ತಮ ಬುನಾದಿಯನ್ನು ಹಾಕಿಕೊಳ್ಳಬೇಕು ಮತ್ತು ಪ್ರತಿ ದಿನ ಉತ್ತಮ ದಿನಪತ್ರಿಕೆಯೊಂದನ್ನು ಓದಬೇಕು ಎಂದಅವರು, ಅಭ್ಯರ್ಥಿಗಳು ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳ ಅಧ್ಯಯನ ನಡೆಸಬೇಕು, ಪರೀಕ್ಷೆಯ ಬಗ್ಗೆ ತಮ್ಮದೇ ಆದ ವಿಶ್ಲೇಷಣೆಯೊಂದಿಗೆ ಯಾವ ಕ್ಷೇತ್ರಗಳಲ್ಲಿ ಹೆಚ್ಚಿನ ಅಧ್ಯಯನ ನಡೆಸಬೇಕು ಎನ್ನುವುದನ್ನು ನಿರ್ಧರಿಸಬೇಕು ಮತ್ತು ಈ ಕ್ಷೇತ್ರಗಳಿಗಾಗಿ ಸಮಯವನ್ನು ನಿಗದಿಗೊಳಿಸಿಕೊಂಡು ಪುಸ್ತಕಗಳು/ನೋಟ್ಸ್/ಆನ್‌ಲೈನ್ ಸಂಪನ್ಮೂಲಗಳನ್ನು ನಿರ್ಧರಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಜಿಎಸ್ ಸ್ಟಾಟಿಕ್ ಮತ್ತು ಡೈನಮಿಕ್... ಹೀಗೆ ಎರಡು ವಿಧದ ಸಾಮಾನ್ಯ ಜ್ಞಾನವನ್ನು ಒಳಗೊಂಡಿರುತ್ತದೆ. ಸ್ಟಾಟಿಕ್ ಜಿಕೆ ಅಲ್ಪಾವಧಿಯಲ್ಲಿ ಮಾಹಿತಿಗಳಲ್ಲಿ ಹೆಚ್ಚಿನ ಬದಲಾವಣೆಗಳಿರದ ಇತಿಹಾಸ, ಭೂಗೋಳ,ಅರ್ಥಶಾಸ್ತ್ರದಂತಹ ವಿಷಯಗಳನ್ನು ಒಳಗೊಂಡಿರುತ್ತದೆ. ಡೈನಮಿಕ್ ಸಾಮಾನ್ಯಜ್ಞಾನ ಪ್ರಚಲಿತ ವಿದ್ಯಮಾನಗಳು ಮತ್ತು ವೃತ್ತಪತ್ರಿಕೆಗಳಲ್ಲಿ ನಾವು ಓದಿರುವ ವಿಷಯಗಳನ್ನು ಒಳಗೊಂಡಿರುತ್ತದೆ. ಹೀಗಾಗಿ ಇವೆರಡೂ ಸಾಮಾನ್ಯ ಜ್ಞಾನದ ವಿಷಯಗಳು ತಮ್ಮ ಅಧ್ಯಯನದ ವ್ಯಾಪ್ತಿಗೆ ಬರುವಂತೆ ಅಭ್ಯರ್ಥಿಗಳು ವೃತ್ತಪತ್ರಿಕೆಗಳು ಮತ್ತು ನಿಯತಕಾಲಿಕಗಳನ್ನು ಓದಬೇಕು ಎಂದು ನಗರ್ ಹೇಳಿದರು. 

ಪ್ರಿಲಿಮಿನರಿ ಪರೀಕ್ಷೆಗಳಸಿದ್ಧತೆಗಾಗಿ ನಗರ್ ಅವರುಸೂಚಿಸಿರುವವಿಷಯವಾರು ಪುಸ್ತಕಗಳ ಪಟ್ಟಿಇಲ್ಲಿದೆ:

► History Of Modern India - Bipan Chandra

► India’s Struggle For Independence - Bipan Chandra

► India’s Ancient Past - RS Sharma

► History Of Medieval India - Satish Chandra

► The Wonder That Was India - AL Bhasham

► Indian Art and Culture - Nitin Singhania

► Geography of India - Majid Husain

► Oxford School Atlas - Oxford

► Certificate Physical and Human Geography - Goh Cheng Leong

► Indian Polity for Civil Services Examinations - M. Laxmikanth

► Indian Economy - Ramesh Singh

► Economic Survey

► Science and Technology in India - Ashok Singh

► Environmental Studies: From Crisis to Cure - Rajagopalan

► Environment for Civil Services Prelims and Mains - Khuller

► India Year Book (Current Affairs)

► Manorama Yearbook. (Current Affairs)

► CSAT Paper - 2 Manual by TMH

► CSAT-II - Arihant

► Analytical Reasoning - M. K. Pandey (CSAT - Paper 2: Analytical Reasoning)

► Verbal & Non-Verbal Reasoning - R. S.Aggarwal (CSAT Paper 2: Reasoning)

► IAS Prelims 22 Years General Studies Topic-Wise Solved Papers - Disha

► IAS (Pre.) Solved Papers General Studies wih CSAT Papers - Arihant

ಈ ಪುಸ್ತಕಗಳಲ್ಲಿ ಅಭ್ಯರ್ಥಿಗಳು ಇಕನಾಮಿಕ್ ಆ್ಯಂಡ್ ಪಾಲಿಟಿಕಲ್ ವೀಕ್ಲಿ, ಯೋಜನಾ, ಕುರುಕ್ಷೇತ್ರ ಮತ್ತು ಸೈನ್ಸ್ ರಿಪೋರ್ಟರ್ ನಂತಹ ಕೆಲವು ಮ್ಯಾಗಝಿನ್ ಗಳನ್ನು ಓದಬಹುದು ಎನ್ನುತ್ತಾರೆ ನಗರ್.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top