ಸಬ್ಸಿಡಿಯೇತರ ಎಲ್ಪಿಜಿ ಬೆಲೆ ಇನ್ನೂ ದುಬಾರಿ
ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲೂ ಹೆಚ್ಚಳ
ಹೊಸದಿಲ್ಲಿ,ನ.1: ಸರಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಬುಧವಾರ ಗೃಹಬಳಕೆ ಅಡುಗೆ ಅನಿಲದ ಬೆಲೆಯನ್ನು ಪ್ರತಿ ಸಿಲಿಂಡರ್ಗೆ 4.50 ರೂ.ಹೆಚ್ಚಿಸಿವೆ. ಸಬ್ಸಿಡಿಯೇತರ ಎಲ್ಪಿಜಿ ಬೆಲೆಯನ್ನು ಪ್ರತಿ ಸಿಲಿಂಡರ್ಗೆ 93 ರೂ. ಮತ್ತು ವಿಮಾನ ಇಂಧನ ಬೆಲೆಯನ್ನು ಶೇ.2ರಷ್ಟು ಹೆಚ್ಚಿಸಲಾಗಿದೆ.
2016,ಜುಲೈನಲ್ಲಿ ಗೃಹಬಳಕೆ ಅಡುಗೆ ಅನಿಲದ ಬೆಲೆಯನ್ನು ಪ್ರತಿ ತಿಂಗಳೂ ಹೆಚ್ಚಿಸುವ ಮೂಲಕ ಸಬ್ಸಿಡಿಯನ್ನು ರದ್ದುಗೊಳಿಸಲು ಸರಕಾರವು ನಿರ್ಧರಿಸಿದ ಬಳಿಕ ಇದು 19ನೇ ಬೆಲೆ ಏರಿಕೆಯಾಗಿದೆ. ಇಂದಿನ ಪರಿಷ್ಕರಣೆಯಿಂದ ಗೃಹಬಳಕೆ ಎಲ್ಪಿಜಿ ಸಿಲಿಂಡರ್ನ ಬೆಲೆ 495.69 ರೂ.ಗೇರಿದ್ದು, ಜೂನ್ 2016ರಲ್ಲಿ ಇದು 419.18 ರೂ.ಆಗಿತ್ತು. ಅಲ್ಲಿಂದೀಚೆಗೆ ಪ್ರತಿ ಸಿಲಿಂಡರ್ ಬೆಲೆಯಲ್ಲಿ 76.51 ರೂ.ಏರಿಕೆಯಾಗಿದೆ.
Next Story